ಪುನೀತ್ ರಾಜ್ಕುಮಾರ್ ಅಂದ್ರೆ ಪವರ್ ಸ್ಟಾರ್. ಆದರೆ ನಟಸಾರ್ವಭೌಮ ನೋಡಿದವರಿಗೆ ಅಚ್ಚರಿಯಾಗುತ್ತಿರುವುದು ಪುನೀತ್ ಸ್ಟೈಲ್. ಕಣ್ಣಿಗೊಂದು ಚೆಂದದ ಕನ್ನಡಕ ಹಾಕಿಕೊಂಡು ಸಿಕ್ಕಾಪಟ್ಟೆ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ ಅಪ್ಪು. ಅಪ್ಪು ಬದಲಾಗುತ್ತಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಸ್ಟೈಲ್, ಲುಕ್, ಮ್ಯಾನರಿಸಂ ಬದಲಾಗುತ್ತಲೇ ಇವೆ. ಈ ಎಲ್ಲದರ ಹಿಂದಿರುವ ಸೀಕ್ರೆಟ್ ಸ್ಟಾರ್ ಯಾರು ಗೊತ್ತಾ..?
ಯೋಗಿ ಜಿ.ರಾಜ್. ಖುಷಿಖುಷಿಯಾಗಿ & ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕ ಯೋಗಿ, ಪುನೀತ್ ಅವರ ಸ್ಟೈಲ್ ಹಿಂದಿರೋ ಸೀಕ್ರೆಟ್ ಸ್ಟಾರ್. ಮೂಲತಃ ಯೋಗಿ ಕಾಸ್ಟ್ಯೂಮ್ ಡಿಸೈನರ್. ತಮ್ಮ ಕೈಚಳಕವನ್ನು ಪುನೀತ್ ಮೇಲೆ ಪ್ರಯೋಗಿಸಿರುವ ಯೋಗಿ, ಪುನೀತ್ರನ್ನು ಸ್ಟೈಲಿಷ್ ನಟಸಾರ್ವಭೌಮನಾಗಿಸಿದ್ದಾರೆ.