ಡಿ.ಕೆ.ರವಿ, 2015ರ ಮಾರ್ಚ್ 15ರಂದುನಿಗೂಢವಾಗಿ ಸಾವನ್ನಪ್ಪಿದ ಅಧಿಕಾರಿ. 2009ನೇ ಬ್ಯಾಚ್‍ನ ಈ ಐಎಎಸ್ ಅಧಿಕಾರಿಯ ಸಾವು ಹೇಗಾಯ್ತು..? ಏಕಾಯ್ತು..? ಅದು ಕೊಲೆಯಾ..? ಆತ್ಮಹತ್ಯೆಯಾ..? ಎಂಬ ಪ್ರಶ್ನೆಗಳಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಡಿಕೆ ರವಿ ಸಾವು, ಕೊಲೆ ಎಂದವರು ಕೂಡಾ ಈಗ ಮಾತನಾಡುತ್ತಿಲ್ಲ. ಮಾರ್ಚ್ 16, 2015. ಆ ದಿನ ಡಿ.ಕೆ.ರವಿ ಶವ, ಅವರದ್ದೇ ಅಪಾರ್ಟ್‍ಮೆಂಟಿನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಿಬಿಐ ತನಿಖೆಯೂ ಯಾವುದೇ ಸುಳಿವು ಕೊಟ್ಟಿಲ್ಲ.
ಹೀಗಿರುವಾಗ.. ಅವರ ಸಾವಿನ ಕುರಿತೇ ರೆಡಿಯಾಗಿದೆ ಚಂಬಲ್ ಸಿನಿಮಾ. ಸಿನಿಮಾ ತಂಡದವರು ಈ ಗುಟ್ಟು ಹೇಳುತ್ತಿಲ್ಲ. ಒಪ್ಪಿಕೊಳ್ಳುತ್ತಿಲ್ಲ. ಆದರೆ, ಚಂಬಲ್ ಸಿನಿಮಾದ ಟ್ರೇಲರ್ ನೋಡಿದವರಿಗೆ ಥಟ್ಟಂತ ನೆನಪಾಗೋದು ಡಿ.ಕೆ.ರವಿ ಕಥೆ.
ನೀನಾಸಂ ಸತೀಶ್ ನಾಯಕರಾಗಿರೋ ಸಿನಿಮಾಗೆ ಜೇಕಬ್ ವರ್ಗಿಸ್ ನಿರ್ದೇಶಕ. ಪುನೀತ್ ರಾಜ್‍ಕುಮಾರ್ ಅವರ ಪೃಥ್ವಿ ಸಿನಿಮಾ ಮಾಡಿದ್ದ ಜೇಕಬ್, ಮತ್ತೊಮ್ಮೆ ಡಿಸಿ ಕಥೆಯನ್ನೇ ಎತ್ತಿಕೊಂಡಿದ್ದಾರೆ. ಸಿನಿಮಾ ಇನ್ನೂ ಯಾವ್ಯಾವ ರಹಸ್ಯ ಸ್ಫೋಟಿಸಲಿದೆಯೋ..?