ನಟಸಾರ್ವಭೌಮ ಚಿತ್ರ ಕ್ರೇಜ್ ಸೃಷ್ಟಿಸುತ್ತಿದೆ. ಟ್ರೆಂಡಿಂಗ್ನಲ್ಲಿ ಈಗಲೂ ಟಾಪ್ 10ನಲ್ಲಿರೋ ನಟಸಾರ್ವಭೌಮ ಚಿತ್ರಕ್ಕೆ ಒಂದು ವಾರ ಮೊದಲೇ ಬುಕ್ಕಿಂಗ್ ಶುರುವಾಗಲಿದೆ. ಫೆಬ್ರವರಿ 3ನೇ ತಾರೀಕಿನಿಂದ ಅಂದರೆ, ಭಾನುವಾರದಿಂದಲೇ ನಟಸಾರ್ವಭೌಮ ಚಿತ್ರಕ್ಕೆ ಟಿಕೆಟ್ ಬುಕ್ ಮಾಡಬಹುದು.
ಕನ್ನಡದಲ್ಲಿ ಮೊದಲ ದಿನವೇ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡುವ ಶಕ್ತಿ ಇರುವ ನಟ ಪುನೀತ್. ಇದರ ಜೊತೆಗೆ ವಾರಕ್ಕೆ ಮೊದಲೇ ಬುಕ್ಕಿಂಗ್ ಶುರುವಾದರೆ ಮೊದಲ ದಿನವೇ ಹೌಸ್ಫುಲ್ ಬೋರ್ಡ್ ಗ್ಯಾರಂಟಿ.
ರಚಿತಾ ರಾಮ್, ಅನುಪಮಾ, ಬಿ.ಸರೋಜಾದೇವಿ, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ ಅಭಿನಯದ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶಕರಾದರೆ, ರಾಕ್ಲೈನ್ ವೆಂಕಟೇಶ್ ನಿರ್ಮಾಪಕ.