ಕೆಜಿಎಫ್ ಇನ್ನೂ ಥಿಯೇಟರುಗಳಲ್ಲಿ ಓಡುತ್ತಿದೆ. ವೀಕೆಂಡ್ ಹೌಸ್‍ಫುಲ್ ಆಗುತ್ತಿದೆ. ಹೀಗಿರುವಾಗಲೇ.. ಇನ್ನೂ 50 ದಿನ ಪೂರೈಸುವ ಮುನ್ನವೇ ಚಿತ್ರ ಟಿವಿಯಲ್ಲಿ ಪ್ರಸಾರವಾಗೋಕೆ ರೆಡಿಯಾಗಿಬಿಟ್ಟಿದೆ. ಹಿಂದಿಗೆ ಡಬ್ ಆಗಿರುವ ಕೆಜಿಎಫ್ ಚಿತ್ರದ ಹಿಂದಿ ವರ್ಷನ್ ಸೋನಿ ಮ್ಯಾಕ್ಸ್‍ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಈಗಾಗಲೇ ಕೆಜಿಎಫ್ ಪ್ರಸಾರದ ಪ್ರೋಮೋ ಹೊರಬಿಟ್ಟಿದೆ ಸೋನಿ ಮ್ಯಾಕ್ಸ್.
ಈ ಹಿಂದೆ ಬಾಹುಬಲಿ ಸಿನಿಮಾವನ್ನೂ ಹೀಗೆಯೇ ಮಾಡಿತ್ತು ಹಿಂದಿ ಚಾನೆಲ್. ಚಿತ್ರ ಥಿಯೇಟಿನಲ್ಲಿರುವಾಗಲೇ ಟಿವಿಯಲ್ಲಿ ಪ್ರಸಾರ ಮಾಡಿತ್ತು. ಅದು ಚಿತ್ರದ ಬಾಕ್ಸಾಫೀಸ್‍ಗೂ ಹೊಡೆತ ಕೊಟ್ಟಿತ್ತು. ಈಗ ಅದೇ ರೀತಿಯಲ್ಲಿ ಕೆಜಿಎಫ್‍ಗೂ ಆಗುತ್ತಾ..? ಗೊತ್ತಿಲ್ಲ. ಪ್ರೋಮೋದಲ್ಲಿ ನಿರೀಕ್ಷಿಸಿ ಎಂದು ಪ್ರೋಮೋ ಬರುತ್ತಿದೆಯೇ ಹೊರತು, ಡೇಟ್ ಮತ್ತು ಟೈಂ ಹೇಳಿಲ್ಲ.