ಪುನೀತ್ ಚಿತ್ರಗಳು ಎಂದರೆ ವಿತರಕರು ಸಾಲುಗಟ್ಟುತ್ತಾರೆ. ಜೊತೆಗೆ ಈ ಬಾರಿ ಪುನೀತ್ ಜೊತೆ ರಾಕ್‍ಲೈನ್ ವೆಂಕಟೇಶ್ ಸಿನಿಮಾ ಎಂಬುದೂ ಸೇರಿ ನಟಸಾರ್ವಭೌಮನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಚಿತ್ರದ ಟ್ರೇಲರ್ ಎಬ್ಬಿಸಿದ ಹವಾ ನೋಡಿದ ವಿತರಕರು, ಚಿತ್ರವನ್ನು ದಾಖಲೆ ಮೊತ್ತಕ್ಕೆ ಖರೀದಿಸಿದ್ದಾರಂತೆ.
ಧೀರಜ್ ಎಂಟರ್‍ಪ್ರೈಸಸ್ ಚಿತ್ರವನ್ನು ಭಾರಿ ಮೊತ್ತಕ್ಕೆ ಖರೀದಿಸಿದ್ದು, 350ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಪುನೀತ್, ರಚಿತಾ ರಾಮ್, ಅನುಪಮಾ, ಚಿಕ್ಕಣ್ಣ, ಸಾಧುಕೋಕಿಲ, ಬಿ.ಸರೋಜಾದೇವಿ, ರವಿಶಂಕರ್ ಸೇರಿದಂತೆ ಭರ್ಜರಿ ತಾರಾಗಣ ಇರುವ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ.