ಧ್ರುವ ಸರ್ಜಾ ಅವರ ಚಿತ್ರಗಳು ಅದೇಕೋ ಏನೋ.. ಶೂಟಿಂಗ್ ಹಂತದಲ್ಲಿ ತೆವಳಿ ತೆವಳಿ ಬರುತ್ತವೆ. ಅವರೊಂಥರಾ ಅಪರೂಪದ ಸ್ಟಾರ್. 7 ವರ್ಷದಲ್ಲಿ ಬಂದಿರೋದು 3 ಸಿನಿಮಾ. ಮೂರಕ್ಕೆ ಮೂರೂ ಹಿಟ್. ಅವೆಲ್ಲವೂ ತೆವಳಿ ತೆವಳಿ ಬಂದಿದ್ದವು. ಈ ಬಾರಿಯೂ ಅಷ್ಟೆ. ಪೊಗರು ಚಿತ್ರ ತೆವಳುತ್ತಿದೆ. ಈಗ ಚಿತ್ರದ ಪ್ರಮುಖ ಹಂತದ ಚಿತ್ರೀಕರಣಕ್ಕೆ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 4ರಿಂದ ಪೊಗರು ಶೂಟಿಂಗ್ ಶುರುವಾಗುತ್ತಿದೆ.
ನಂದ ಕಿಶೋರ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಚಿತ್ರದ ಪ್ರಮುಖ ಪೋಷಕ ಪಾತ್ರಗಳಿಗೆ ದೊಡ್ಡ ದೊಡ್ಡ ಕಲಾವಿದರಿದ್ದಾರೆ. ಫೆಬ್ರವರಿ 4ರಂದು ಹೀರೋ ಇಂಟ್ರೊಡಕ್ಷನ್ ಫೈಟಿಂಗ್ ಸೀನ್ ಶೂಟಿಂಗ್ ಇದೆ ಎಂದಿದ್ದಾರೆ ನಂದಕಿಶೋರ್.