` ಅಪ್ಪು ಡ್ಯಾನ್ಸ್‍ನ್ನು ಕಿಚ್ಚ ಹೊಗಳಿದ್ದು ಹೀಗೆ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep praises puneeth's dancing skills
Sudeep Praises Puneeth

`ನನಗೆ ಎರಡು ಆಪ್ಷನ್‍ಗಳನ್ನು ಕೊಡಲಾಗಿತ್ತು. ಒಂದು - ದೇಹವನ್ನು ದಂಡಿಸಿ ಟೋನ್ ಮಾಡಿಕೊಳ್ಳುವುದು. ಎರಡು - ಡ್ಯಾನ್ಸರ್ ಆಗುವುದು. ನನ್ನ ಆಯ್ಕೆ ಏನು ಎನ್ನುವುದು ಇಡೀ ಜಗತ್ತಿಗೇ ಗೊತ್ತು. ನಾನು ಇದ್ದುದರಲ್ಲಿ ಸುಲಭ ಎನ್ನಿಸಿದ ಮೊದಲನೆಯದನ್ನೇ ಆಯ್ಕೆ ಮಾಡಿಕೊಂಡೆ. ಜೀವನವನ್ನು ಸುಲಭ ಮಾಡಿಕೊಂಡಿದ್ದೇನೆ. ನೀವು ಡ್ಯಾನ್ಸ್ ಮಾಡೋದನ್ನು ನೋಡಿ ಖುಷಿಪಡುತ್ತೇನೆ'

ಪುನೀತ್ ರಾಜ್‍ಕುಮಾರ್ ಡ್ಯಾನ್ಸ್ ಬಗ್ಗೆ ಕಿಚ್ಚ ಸುದೀಪ್ ಹೇಳಿರುವುದು ಹೀಗೆ. ನಟಸಾರ್ವಭೌಮ ರಿಲೀಸ್‍ಗೆ ಕಾಯುತ್ತಿದ್ದೇನೆ ಎಂದಿರುವ ಸುದೀಪ್, ಅಪ್ಪು ಚಿತ್ರಕ್ಕೆ ಶುಭ ಹಾರೈಸಿದ್ದಾರೆ. 

ಸುದೀಪ್ ಅವರಿಗೆ ಥ್ಯಾಂಕ್ಸ್ ಹೇಳಿರುವ ಪುನೀತ್, `ಪೈಲ್ವಾನ್ ಚಿತ್ರದ ಟೀಸರ್ ಇಂಟರೆಸ್ಟಿಂಗ್ ಆಗಿದೆ' ಎಂದಿದ್ದಾರೆ. 

ಕನ್ನಡದ ಇಬ್ಬರು ಸ್ಟಾರ್‍ಗಳ ನಡುವಿನ ಈ ಸ್ನೇಹ ಸಂಭಾಷಣೆ ಅಭಿಮಾನಿಗಳಿಗೆ ಹಬ್ಬ ಸೃಷ್ಟಿಸಿದೆ.

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images