ನನ್ನ ಮಗನ ಸಿನಿಮಾ ಪ್ರದರ್ಶನವಿದೆ. ದಯವಿಟ್ಟು ಎಲ್ಲರೂ ಬರಬೇಕು. ಹೀಗೆಂದು ಸಿಎಂ ಕುಮಾರಸ್ವಾಮಿ ಮಾಡಿದ ಆಹ್ವಾನಕ್ಕೆ ಬಹುತೇಕ ಎಲ್ಲ ಗಣ್ಯರೂ ಆಗಮಿಸಿ, ಥಿಯೇಟರಿಗೆ ಬಂದು ಚಿತ್ರವನ್ನು ನೋಡಿ ಮೆಚ್ಚಿ ಕೊಂಡಾಡಿದ್ದಾರೆ.
ಸಿದ್ದರಾಮಯ್ಯ, ಜಮೀರ್ ಅಹ್ಮದ್, ಶಿವರಾಮೇ ಗೌಡ, ಈಶ್ವರಪ್ಪ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಚಿತ್ರಕ್ಕೆ ಬರಲು ಸಾಧ್ಯವಾಗದಿದ್ದರೂ, ಮಗನ ಸಿನಿಮಾ ನೋಡಿ ಖುಷಿ ಪಡಿ. ರಾಜಕೀಯ ಜಂಜಾಟ ಮರೆತುಬಿಡಿ ಎಂದು ಶುಭ ಹಾರೈಸಿದ್ದಾರೆ.
ಎಲ್ಲರ ನಡುವೆ ಸಿನಿಮಾ ನೋಡಿದ ಕುಮಾರಸ್ವಾಮಿ `ಮಗನ ಸಿನಿಮಾ ತುಂಬಾ ಚೆನ್ನಾಗಿದೆ. ಹಾಡು, ಡ್ಯಾನ್ಸು, ಫೈಟು, ಅಭಿನಯ ಎಲ್ಲದರಲ್ಲೂ ಮಗ ನಿಖಿಲ್ ತುಂಬಾ ಚೆನ್ನಾಗಿ ಮಾಡಿದ್ದಾನೆ. ನನಗಂತೂ ಸಿನಿಮಾ ಡಾ.ರಾಜ್ ಸಿನಿಮಾಗಳನ್ನು ನೆನಪಿಸಿತು. ಮಗನಿಗೆ ನಾನು 100ಕ್ಕೆ 100 ಅಂಕ ಕೊಡುತ್ತೇನೆ' ಎಂದಿದ್ದಾರೆ.