ಪತ್ರಕರ್ತ, ಸಿನಿಮಾಗಳ ಪ್ರಚಾರಕರ್ತ ದಿವಂಗತ ಡಿ.ವಿ.ಸುಧೀಂದ್ರ ಅವರ ನೆನಪಿನಲ್ಲಿ ನೀಡುವ ಪ್ರಶಸ್ತಿ. ಚಿತ್ರರಂಗದ ಗಣ್ಯಾತಿಗಣ್ಯ ಸಾಧಕರು, ನವ ಪ್ರತಿಭೆಗಳನ್ನು ಹುಡುಕಿ ಕೊಡಮಾಡುವ ಪ್ರಶಸ್ತಿ. ಈ ಬಾರಿ ಜನವರಿ 25ಕ್ಕೆ ಪ್ರಶಸ್ತಿ ಪ್ರಧಾನ ನಡೆಯಲಿದೆ. ಚಿತ್ರವಾಣಿ ಪತ್ರಿಕೆಗೆ 25 ವರ್ಷ ತುಂಬಿದಾಗ ಆರಂಭಿಸಿದ ಸಂಪ್ರದಾಯ ಇದು.
ಈ ಬಾರಿ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ, ನಟ ದೊಡ್ಡಣ್ಣ, ಹಿನ್ನೆಲೆ ಗಾಯಕಿ ಎಸ್.ಜಾನಕಿ, ನಿರ್ದೇಶಕ ಪಿ.ವಾಸು, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಿರ್ದೇಶಕ ರಿಷಬ್ ಶೆಟ್ಟಿ, ಸಂಭಾಷಣೆಕಾರ ಬಿ.ಎ.ಮಧು, ಚೊಚ್ಚಲ ನಿರ್ದೇಶನಕ್ಕಾಗಿ ಕಾರ್ತಿಕ್ ಸರಗೂರು, ಚಂಪಾಶೆಟ್ಟಿ, ಚಿತ್ರಸಾಹಿತಿ ಕೆ.ಕಲ್ಯಾಣ್ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುಧೀಂದ್ರ ವೆಂಕಟೇಶ್ ತಿಳಿಸಿದ್ದಾರೆ.