ಲವ್ ಫೇಲ್ಯೂರ್ ಆದಾಗ ಹೀರೋಗಳು ಡಿಸೈನ್ ಡಿಸೈನಾಗಿ ಕಣ್ಣೀರು ಹಾಕೋದನ್ನ ಬೇಜಾನ್ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ, ಬಜಾರ್‍ನಲ್ಲಿ ನಿಮಗೆ ಬೇರೆಯದೇ ಸ್ಟೈಲ್ ಇದೆ. ಮುಂದಿನ ವಾರ ತೆರೆಗೆ ಬರ್ತಿರೋ ಸಿಂಪಲ್ ಸುನಿ ನಿರ್ದೇಶನದ ಬಜಾರ್‍ನಲ್ಲಿ ಹೀರೋ ಲವ್ ಫೇಲ್ಯೂರ್ ಆಗಲಿ ಎಂದು ಬಯಸಿ ಬಯಸೀ ಭಗ್ನ ಪ್ರೇಮಿಯಾಗ್ತಾನೆ.
ಅಷ್ಟೇ ಅಲ್ಲ.. ಲವ್ ಫೇಲ್ಯೂರ್ ಆಗೋಯ್ತು ನನಗೆ.. ಫೀಲ್ ಅಂತೂ ಸೂಪರ್ ಕಣ್ಣೀರ ಜೊತೆಗೆ.. ಅನ್ನೋ ಹಾಡೂ ಇದೆ. ಧನ್ವೀರ್ ಈ ಹಾಡು ಹಾಡಿ ಕುಣಿತಾರಂತೆ. ಹುಡುಗರಿಗೆಲ್ಲ.. ಅದರಲ್ಲೂ ಭಗ್ನಪ್ರೇಮಿಗಳಿಗೆಲ್ಲ ಹಾಡು ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ.
ಆದಿತಿ ಪ್ರಭುದೇವ ನಾಯಕಿಯಾಗಿರುವ ಚಿತ್ರದಲ್ಲಿ ಪಾರಿವಾಳ ಮತ್ತು ಭೂಗತ ಲೋಕದ ನಂಟಿನ ಕಥೆಯಿದೆ. ಇದುವರೆಗಿನ ಸುನಿ ಚಿತ್ರಗಳ ಸ್ಟೈಲೇ ಬೇರೆ.. ಈ ಚಿತ್ರದ ಸ್ಟೈಲೇ ಬೇರೆ ಎನ್ನುತ್ತಿದೆ ಸ್ಯಾಂಡಲ್‍ವುಡ್.