ನಟಸಾರ್ವಭೌಮ ಚಿತ್ರದ ಟ್ರೇಲರ್ ಬಿಡುಗಡೆಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದರೆ, ಚಿತ್ರದ ಒಂದು ರಹಸ್ಯ ಸೋರಿಕೆಯಾಗಿಬಿಟ್ಟಿದೆ. ಚಿತ್ರದಲ್ಲಿ ಒಂದು ದೆವ್ವ ಅರ್ಥಾತ್ ಭೂತ ಅಂದ್ರೆ ಆತ್ಮವೊಂದು ಇರಲಿದೆ. ಪುನೀತ್ ಪಾಲಿಗೆ ಇದು ಮೊತ್ತಮೊದಲ ಹಾರರ್ ಸಿನಿಮಾ ಆಗಲಿದೆ. ಹಾಗಾದರೆ, ದೆವ್ವ ಯಾರು..?
ರಚಿತಾ, ಅನುಪಮಾ ನಾಯಕಿಯರು. ಬಿ.ಸರೋಜಾದೇವಿಯವರದ್ದೊಂದು ಪ್ರಧಾನ ಪಾತ್ರ. ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ.. ಮೊದಲಾದವರು ಚಿತ್ರದಲ್ಲಿದ್ದಾರೆ. ಇವರಲ್ಲೇ ಒಬ್ಬರು.. ಅಥವಾ ಇವರನ್ನು ಹೊರತುಪಡಿಸಿ ಒಬ್ಬರು ಚಿತ್ರದಲ್ಲಿ ದೆವ್ವವಾಗಿರ್ತಾರೆ ಅನ್ನೋದು ಕನ್‍ಫರ್ಮು. ಟ್ರೇಲರ್‍ನಲ್ಲಿಯೂ ಆ ಗುಟ್ಟು ಹೇಳೋದಿಲ್ವಂತೆ ನಿರ್ದೇಶಕ ಪವನ್ ಒಡೆಯರ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಹೀಗೆಯೇ ಭರ್ಜರಿ ಸದ್ದು ಮಾಡುತ್ತಿದೆ. ರಿಲೀಸ್ ಡೇಟು ಕೂಡಾ ಹತ್ತಿರವಾಗುತ್ತಿದೆ.