` ತಂದೆಗೆ ತಕ್ಕ ಮಗನಾದ ಆದಿ ಹರಿಕೃಷ್ಣ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
like father.. like son
V Harikrishna's with his Family

ಸಾಮಾನ್ಯವಾಗಿ ಮಕ್ಕಳು ತಂದೆ ಅಥವಾ ತಾಯಿಯ ಹಾದಿಯಲ್ಲೇ ಸಾಗುವುದು ವಾಡಿಕೆ. ಹರಿಕೃಷ್ಣ ಪುತ್ರನೂ ಇದಕ್ಕೆ ಹೊರತಾಗಿಲ್ಲ.  ಅಪ್ಪ ಮ್ಯೂಸಿಕ್ ಡೈರೆಕ್ಟರ್ ಆಗಿರೋ ಕಾರಣಕ್ಕೆ ಮಗನೂ ಮ್ಯೂಸಿಕ್ ಡೈರೆಕ್ಟರ್. ಅಫ್‍ಕೋರ್ಸ್.. ಮನೆಯಲ್ಲಿ ಅಪ್ಪ ಮ್ಯೂಸಿಕ್ ಡೈರೆಕ್ಟರು. ಅಮ್ಮ ಸಿಂಗರು. ಹೀಗಿರೋವಾಗ ಸಹಜವಾಗಿಯೇ ಸಂಗೀತದ ಮೇಲೆ ಪ್ರೇಮ, ಕುತೂಹಲ ಮೂಡುವುದು ಸಹಜ. ಆದಿಯೂ ಇದಕ್ಕೆ ಹೊರತಾಗಿಲ್ಲ.

ಆದಿ ಹರಿಕೃಷ್ಣ ಈಗ ಸಂಗೀತ ನಿರ್ದೇಶಕನಾಗಿದ್ದು, ಅವರೇ ಕಂಪೋಸ್ ಮಾಡಿದ್ದಾರೆ. ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರದಲ್ಲಿ ನೀನೇ ಮೊದಲು.. ನೀನೇ ಕೊನೆ.. ಬೇರೆ ಯಾರೂ ಬೇಡ ನನಗೆ ಹಾಡಿಗೆ ಸಂಗೀತ ಕಟ್ಟಿಕೊಟ್ಟಿದ್ದಾರೆ ಆದಿ. ಅಂದಹಾಗೆ, ಚಿತ್ರದ ಸಂಗೀತ ನಿರ್ದೇಶಕ ಹರಿಕೃಷ್ಣ ಅವರೇ. ತಂದೆಯ ಗರಡಿಯಲ್ಲೇ ಹಾಡು ಸೃಷ್ಟಿಸಿದ್ದಾರೆ ಆದಿ.

ಎ.ಪಿ.ಅರ್ಜುನ್ ಬರೆದಿರುವ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ. ವಿರಾಟ್ ಮತ್ತು ಶ್ರೀಲೀಲಾ ನಟಿಸಿರುವ ಚಿತ್ರಕ್ಕೆ ರಾಷ್ಟ್ರಕೂಟ ಪಿಕ್ಚರ್ಸ್‍ನ ರವಿಕುಮಾರ್ ನಿರ್ಮಾಪಕರು.

Trayambakam Movie Gallery

Rightbanner02_butterfly_inside

Paddehuli Movie Gallery