ನಟಸಾರ್ವಭೌಮ ಚಿತ್ರದ ಯುಗಳ ಗೀತೆ ಹೊರಬಿದ್ದಿದೆ. ಪವರ್ ಸ್ಟಾರ್ ಪುನೀತ್-ಪವನ್ ಒಡೆಯರ್-ರಾಕ್‍ಲೈನ್ ವೆಂಕಟೇಶ್-ರಚಿತಾ ರಾಮ್ ಕಾಂಬಿನೇಷನ್ನಿನ ಸಿನಿಮಾ. ಫೆಬ್ರವರಿ 7ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾದ ಯುಗಳ ಗೀತೆಯನ್ನು ತೇಲಿಬಿಟ್ಟಿದೆ ಚಿತ್ರತಂಡ.
ಜೋಪಾನ.. ಜೋಕೆ ಜೋಪಾನ.. ನನ್ನ ಹೃದಯ ಕದಿಯೋ ಕಳ್ಳ ಬಂದ ಜೋಪಾನ.. ಸೋತೆ ನಾ.. ಪೂರ್ತಿ ಸೋತೆ ನಾ.. ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆ ನಾ.. ಸುಳಿದರು ಕಣ್ಣ ಮುಂದೆ.. ಹುಡುಗರು ನೂರು.. ಸರಿಸಮ ಯಾರಿಲ್ಲ ಇವನಿಗೆ ಚೂರು.. ಇವನನು ಹೆತ್ತವರು ಯಾರು..
ಯಾರೋ ನಾನು.. ಯಾರೋ ನೀನು.. ನಂದೂ ನಿಂದೂ ಒಂದೇ ಏನು..?
ಕವಿರಾಜ್ ಬರೆದಿರುವ ಹಾಡಿಗೆ ಅಷ್ಟೇ ಮಧುರ ಧ್ವನಿ ಕೊಟ್ಟಿರೋದು ಶ್ರೇಯಾ ಘೋಷಾಲ್. ಇಮಾನ್ ಮ್ಯೂಸಿಕ್ ನೀಡಿರುವ ಸಿನಿಮಾದ ಹಾಡು, ಹೃದಯ ಕದಿಯುವಂತಿದೆ.