` ಲವ್ ಯೂ ಎನ್ನಲಾ.. ಕಲ್ಯಾಣ ಎನ್ನಲಾ.. ರಚಿತಾ ರಾಮ್ ಗೊಂದಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
one day two events
Rachita Ram

ಎರಡು ದೊಡ್ಡ ಸಿನಿಮಾಗಳು. ಎರಡೂ ಚಿತ್ರಗಳ ಮೇಲೆ ಭರ್ಜರಿ ನಿರೀಕ್ಷೆ. ಎಲ್ಲಿ ಹೋಗೋದು.. ಏನ್ ಮಾಡೋದು.. ಸಂಪೂರ್ಣ ಗೊಂದಲದಲ್ಲಿರೋದು ಡಿಂಪಲ್ ಚೆಲುವೆ ರಚಿತಾ ರಾಮ್. ಅವರಿಗೆ ಈಗ ಜನವರಿ 19ರ ಟೆನ್ಷನ್.

ಜನವರಿ 19ಕ್ಕೆ ಮೈಸೂರಿನಲ್ಲಿ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಪ್ರಿ-ರಿಲೀಸ್ ಈವೆಂಟ್ ಇದೆ. ಜನವರಿ 25ಕ್ಕೇ ರಿಲೀಸ್ ಆಗುತ್ತಿರುವ ಚಿತ್ರವದು. ನಿಖಿಲ್ ಕುಮಾರಸ್ವಾಮಿ ಜೊತೆ ನಟಿಸಿರುವ ಚಿತ್ರ. ಸಿಎಂ ಕುಮಾರಸ್ವಾಮಿ ಬ್ಯಾನರ್‍ನ ಸಿನಿಮಾ. ಎ. ಹರ್ಷ ನಿರ್ದೇಶನದ ಸಿನಿಮಾ. 

ಅದೇ ದಿನ.. ಇತ್ತ ದಾವಣಗೆರೆಯಲ್ಲಿ ಐ ಲವ್ ಯೂ ಸಿನಿಮಾದ ಆಡಿಯೋ ಬಿಡುಗಡೆ. ಕನ್ನಡ ಮತ್ತು ತೆಲುಗು ಚಿತ್ರರಂಗದ ಸ್ಟಾರ್‍ಗಳು ಆ ದಿನ ದಾವಣಗೆರೆಯಲ್ಲಿರುತ್ತಾರೆ. ರಾಜಮೌಳಿ ಸೇರಿದಂತೆ.. ಉಪೇಂದ್ರ ಹೀರೋ. ಆರ್.ಚಂದ್ರು ನಿರ್ದೇಶಕ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಪ್ರೇಮಿಗಳ ದಿನಕ್ಕೆ ರಿಲೀಸ್ ಆಗುತ್ತಿರುವ ಚಿತ್ರ. 

ಈಗ.. ರಚಿತಾ ರಾಮ್ ಕನ್‍ಫ್ಯೂಸ್ ಇದೇ. ಮೈಸೂರಿಗೆ ಹೋಗೋದೊ.. ದಾವಣಗೆರೆಗೆ ಹೋಗೋದೋ.. 

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images