` ಜುಗಾರಿ ಕ್ರಾಸ್ ಹೀರೋ ಚಿರಂಜೀವಿ ಸರ್ಜಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jugari cross hero finally finalised
TS Nagabhabharna, Chiranjeeivi Sarja

ಜುಗಾರಿ ಕ್ರಾಸ್ ಅನ್ನೋ ಕಾದಂಬರಿಯನ್ನ ಸಿನಿಮಾ ಮಾಡೋಕೆ ಹೊರಟವರು ಒಬ್ಬಿಬ್ಬರಲ್ಲ. ರಾಜೇಂದ್ರ ಸಿಂಗ್ ಬಾಬು, ಕೋಡ್ಲು ರಾಮಕೃಷ್ಣ ಸೇರಿದಂತೆ ಹಲವರು ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಗೆ ಸಿನಿಮಾ ರೂಪ ಕೊಡೋಕೆ ಪ್ರಯತ್ನಿಸಿದ್ದರು. ಸಕ್ಸಸ್ ಆಗಿರಲಿಲ್ಲ. ಪೂಚಂತೇ ಅವರ ಆ ಕಾದಂಬರಿ, ಸಾಹಿತ್ಯ ಲೋಕದ ನಕ್ಷತ್ರಗಳಲ್ಲಿ ಒಂದು. ಈಗ ಆ ಕಾದಂಬರಿಯನ್ನು ಸಿನಿಮಾ ಮಾಡೋಕೆ ದಿಟ್ಟ ಹೆಜ್ಜೆಯಿಟ್ಟಿರುವುದು ನಿರ್ದೇಶಕ ನಾಗಾಭರಣ.

ಕಾದಂಬರಿಯನ್ನು ಈಗಿನ ಕಾಲಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದೇವೆ. ಏಕೆಂದರೆ, ಮಲೆನಾಡು ಬದಲಾಗಿದೆ. ಅದಕ್ಕಾಗಿ 17 ಬಾರಿ ಚಿತ್ರಕಥೆಯನ್ನು ತಿದ್ದಿದ್ದೇನೆ. ಈಗ ಫೈನಲ್ ಆಗಿದೆ ಎಂದಿದ್ದಾರೆ ನಾಗಾಭರಣ.

ಚಿತ್ರಕ್ಕೆ ಹೀರೋ ಆಗಿ ಆಯ್ಕೆಯಾಗಿರೋದು ಚಿರಂಜೀವಿ ಸರ್ಜಾ. ಕಡ್ಡಿಪುಡಿ ಚಂದ್ರು ಜುಗಾರಿ ಕ್ರಾಸ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ಬಿರುಸಿನಿಂದ ನಡೆಯುತ್ತಿದೆ.

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images