` ಯುವರತ್ನ ಅಪ್ಪು ಜೊತೆ ತಮನ್ನಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
will tamannah pair opposite puneeth in yuvataratna
Tamannah, Puneeth Rajkumar

ತಮನ್ನಾ ಭಾಟಿಯಾ ಎಂಬ ಈ ಚೆಲುವೆ ಕನ್ನಡದಲ್ಲಿ ಕಾಣಿಸಿಕೊಂಡಿರೋದು ಎರಡು ಐಟಂ ಸಾಂಗುಗಳಲ್ಲಿ. ಮತ್ತು ಪುನೀತ್ ಜೊತೆಗಿನ ಜಾಹೀರಾತಿನಲ್ಲಿ. ಅಷ್ಟು ಬಿಟ್ಟರೆ, ಟಾಲಿವುಡ್, ಕಾಲಿವುಡ್, ಬಾಲಿವುಡ್‍ನಲ್ಲಿ ಸುತ್ತುತ್ತಿರುವ ಈ ಚೆಲುವೆ ಕನ್ನಡದಲ್ಲಿ ಪ್ರಧಾನ ಪಾತ್ರಕ್ಕೆ ಬಂದೇ ಇಲ್ಲ. ಹಲವು ಬಾರಿ ಕನ್ನಡದಲ್ಲಿ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದ ತಮನ್ನಾ, ಈ ಬಾರಿ ಬರೋದು ಖಚಿತಾನಾ..?

ಒಂದು ಮೂಲದ ಪ್ರಕಾರ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್ ಹಾಗೂ ಹೊಂಬಾಳೆ ಕಾಂಬಿನೇಷನ್ನಿನ ಯುವರತ್ನ ಚಿತ್ರಕ್ಕೆ ತಮನ್ನಾ ಬರುತ್ತಿದ್ದಾರೆ. ಮಾತುಕತೆ ನಡೆಯುತ್ತಿರುವುದು ಹೌದು ಎನ್ನುತ್ತಿರುವ ಚಿತ್ರತಂಡ, ಸುದ್ಧಿಯನ್ನು ಅಧಿಕೃತಗೊಳಿಸಿಲ್ಲ. ಏಕೆಂದರೆ, ಯಾವುದೂ ಇನ್ನೂ ಫೈನಲ್ ಆಗಿಲ್ಲ.