ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡ ಪ್ಲಾನ್ ಪ್ರಕಾರವೇ ಆಗಿದ್ದರೆ, ಡಿಸೆಂಬರ್ ಆರಂಭದಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ತಾಂತ್ರಿಕ ತೊಂದರೆಗಳಿಂದ ಜನವರಿಗೆ ಮುಂದೂಡಲ್ಪಟ್ಟಿದ್ದ ಕವಚ, ಈಗ ಮತ್ತೆ ಫೆಬ್ರವರಿಗೆ ಮುಂದೆ ಹೋಗಿದೆ.
ತಾಂತ್ರಿಕ ತೊಂದರೆ ಏನಿರಬಹುದು ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಚಿತ್ರದಲ್ಲಿ ಬಳಸಿರುವ ಪದವೊಂದಕ್ಕೆ ಸೆನ್ಸಾರ್‍ನವರು ಆಕ್ಷೇಪ ವ್ಯಕ್ತಪಡಿಸಿದ್ದು, ಅದಕ್ಕೆ ಪರ್ಯಾಯ ಪದ ಜೋಡಿಸಿ, ಡಬ್ಬಿಂಗ್‍ನಲ್ಲೂ ತೊಂದರೆಯಾಗದಂತೆ ನೋಡುವ ಸಾಹಸದಲ್ಲಿದೆಯಂತೆ ಚಿತ್ರತಂಡ. ಹಲವು ವರ್ಷಗಳ ನಂತರ ಶಿವರಾಜ್‍ಕುಮಾರ್ ರೀಮೇಕ್ ಸಿನಿಮಾದ ಕಥೆಯನ್ನು ಮೆಚ್ಚಿಕೊಂಡು, ಒಪ್ಪಿಕೊಂಡು ನಟಿಸಿದ್ದಾರೆ ಎನ್ನವ ಕಾರಣಕ್ಕೇ ಚಿತ್ರದ ಮೇಲೆ ಕುತೂಹಲ ನೂರು ಪಟ್ಟು ಹೆಚ್ಚಾಗಿದೆ.
ವರ್ಮಾ ಬಳಿ ಸಹಾಯಕ ನಿರ್ದೇಶಕರಾಗಿದ್ದ ವಾಸು, ಈ ಚಿತ್ರಕ್ಕೆ ನಿರ್ದೇಶಕರಾಗಿದ್ದಾರೆ. ಜನವರಿ 18ಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದ್ದ ಅಭಿಮಾನಿಗಳು ಕೂಡಾ ಸಂಭ್ರಮವನ್ನು ಮತ್ತೆ ಮುಂದಕ್ಕೆ ಹಾಕಿದ್ದಾರೆ.