ಕವಚ. ಮುಂದಿನ ವಾರ ತೆರೆಗೆ ಬರುತ್ತಿರುವ ಶಿವರಾಜ್ ಕುಮಾರ್ ಸಿನಿಮಾ. ಸಿನಿಮಾದಲ್ಲಿ ಶಿವಣ್ಣ ಅಂದನಾಗಿ ನಟಿಸುತ್ತಿದ್ದಾರೆ. 16 ವರ್ಷಗಳ ನಂತರ ರೀಮೇಕ್ ಸಿನಿಮಾ ಮಾಡುತ್ತಿದ್ದು, ಮಲಯಾಳಂನಲ್ಲಿ ಮುಮ್ಮಟ್ಟಿ ನಟಿಸಿದ್ದ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಅದಕ್ಕಿಂತಲೂ ಜನ ಮೆಚ್ಚುವ ಕೆಲಸಕ್ಕೆ ಕೈ ಹಾಕಿರುವುದು ಶಿವಣ್ಣನ ಫ್ಯಾನ್ಸ್.
ಜನವರಿ 18ಕ್ಕೆ ಕವಚ ರಿಲೀಸ್ ಆಗುತ್ತಿದೆಯಲ್ಲ. ಆ ದಿನ ತ್ರಿವೇಣಿ ಚಿತ್ರಮಂದಿರದಲ್ಲಿ ಬೆಂಗಳೂರಿನ ಶಿವಸೈನ್ಯ ಅಭಿಮಾನಿಗಳ ಸಂಘ ನೇತ್ರ ತಪಾಸಣೆ, ನೇತ್ರ ಚಿಕಿತ್ಸೆ ಹಮ್ಮಿಕೊಂಡಿದೆ. ವರ್ಧಮಾನ್ ಕಣ್ಣಿನ ಆಸ್ಪತ್ರೆ ವೈದ್ಯರೂ, ಅಭಿಮಾನಿಗಳ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಅಷ್ಟೇ ಅಲ್ಲ.. ಆ ದಿನ ನೀವು ನೇತ್ರದಾನವನ್ನೂ ಮಾಡಬಹುದು. ಜಿವಿಆರ್ ವಾಸು ನಿರ್ದೇಶನದ ಚಿತ್ರದಲ್ಲಿ ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ ನಟಿಸಿದ್ದಾರೆ.