ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಹೀರೋ ಅನೀಶ್ ತೇಜೇಶ್ವರ್, ಈಗ ಇನ್ಷೂರೆನ್ಸ್ ಏಜೆಂಟ್ ಆಗಿದ್ದಾರೆ. ಅದು ಹೊಸ ಸಿನಿಮಾಗಾಗಿ. ರಾಮಾರ್ಜುನ ಅನ್ನೋ ಹೊಸ ಚಿತ್ರಕ್ಕೆ ಸಿದ್ಧರಾಗಿರುವ ಅನೀಶ್ ತೇಜೇಶ್ವರ್ ಈ ಬಾರಿ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.
ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ನಾಯಕಿಯಾಗಿದ್ದ ನಿಶ್ವಿಕಾ ನಾಯ್ಡು ಮತ್ತೊಮ್ಮೆ ಅನೀಶ್ಗೆ ಜೋಡಿಯಾಗುತ್ತಿದ್ದಾರೆ. ಅರ್ಜುನ್ ಎನ್ನುವುದು ಚಿತ್ರದ ನಾಯಕನ ಹೆಸರು. ಎಂಥವರನ್ನೂ ಮರುಳು ಮಾಡಿ ಇನ್ಷೂರೆನ್ಸ್ ಮಾಡಿಸಿಕೊಳ್ಳಲು ಒಪ್ಪಿಸುವ ನಾಯಕನ ಪಾತ್ರ. ಹೀಗಿರುವಾಗ ಅವನಿಗೇ ಒಂದು ಪ್ರಾಬ್ಲಂ ಎದುರಾಗುತ್ತೆ. ಆಗ ಅರ್ಜುನ್ ಆತ್ಮಹತ್ಯೆ ಮಾಡಿಕೊಳ್ಳೋಕೆ ನಿರ್ಧರಿಸುತ್ತಾನೆ. ಮುಂದೇನು ಅನ್ನೋದೇ ಕಥೆ ಎಂದು ವಿವರ ಕೊಡುತ್ತಾರೆ ಅನೀಶ್. ಪಕ್ಕಾ ಕಮರ್ಷಿಯಲ್ ಆಗಿಯೇ ಚಿತ್ರವನ್ನು ತೆರೆಯ ಮೇಲೆ ತರೋದಾಗಿ ಹೇಳಿದ್ದಾರೆ ಅನೀಶ್ ತೇಜೇಶ್ವರ್.