` ಸಂಕ್ರಾಂತಿಗೆ ದರ್ಶನ್ ಶಿವನಂದಿ ಕಾಣಿಕೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shivanandi song on sankranthi
Yajamana

ಸಂಕ್ರಾಂತಿಯಲ್ಲಿ ಚಿತ್ರರಂಗದಿಂದ ಸಹಜವಾಗಿಯೇ ವಿಶೇಷ ಕಾಣಿಕೆಗಳಿರುತ್ತವೆ. ಅದು ಅಭಿಮಾನಿಗಳಿಗಾಗಿ. ಹೀಗಾಗಿಯೇ ಈ ಬಾರಿ ದರ್ಶನ್ ಸಂಕ್ರಾಂತಿಗೆ ವಿಶೇಷ ಉಡುಗೊರೆ ಕೊಡುತ್ತಿದ್ದಾರೆ. ದರ್ಶನ್ ಅವರ ಯಜಮಾನ ಚಿತ್ರದ ಶಿವನಂದಿ ಹಾಡು ಸಂಕ್ರಾಂತಿಗೇ ರಿಲೀಸ್ ಆಗುತ್ತಿದೆ. 

ಪಿ.ಕುಮಾರ್ ಮತ್ತು ಹರಿಕೃಷ್ಣ ನಿರ್ದೇಶನದ ಯಜಮಾನ ಚಿತ್ರದ ಈ ಹಾಡಿಗೆ ಸಾಹಿತ್ಯ ಬರೆದಿರುವುದು ಬಹದ್ದೂರ್ ಚೇತನ್. ಶೈಲನಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಣದ ಚಿತ್ರವಿದು. ದರ್ಶನ್ ಸಿನಿಮಾಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ಅಭಿಮಾನಿಗಳಿಗೆ ಇದು ಊಟಕ್ಕೆ ಮೊದಲಿನ ಉಪ್ಪಿನಕಾಯಿ.