` ದಯವಿಟ್ಟು ಹಿಂಗೆಲ್ಲ ಮಾಡ್ಕೋಬೇಡಿ.. ಮತ್ತೆ ಹಿಂಗಾದ್ರೆ ನಾನು ಬರಲ್ಲ - ಯಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yash fan attempts suicide
Yash

ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಈ ವರ್ಷ ಹುಟ್ಟುಹಬ್ಬ ಇಲ್ಲ ಎಂದು ಯಶ್, ತಮ್ಮ ಹುಟ್ಟುಹಬ್ಬಕ್ಕೆ ಮೊದಲೇ ಹೇಳಿದ್ದರು. ಸಂಭ್ರಮಾಚರಣೆ ಬೇಡ ಎಂದು ಮನವಿ ಮಾಡಿಕೊಂಡಿದ್ದರು. ಹೀಗಿದ್ದೂ ಯಶ್ ಅವರ ಅತಿರೇಕಿ ಅಭಿಮಾನಿಯೊಬ್ಬ ಯಶ್ ಮನೆ ಎದುರು ಆತ್ಮಹತ್ಯೆಗೆ ಯತ್ನಿಸಿಬಿಟ್ಟಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ಹೋರಾಡುತ್ತಿರುವ ರವಿ ಎಂಬ ಅಭಿಮಾನಿಯನ್ನು ಖುದ್ದು ಯಶ್ ಭೇಟಿ ಮಾಡಿದ್ದಾರೆ. ಸಾಂತ್ವನ ಹೇಳಿದ್ದಾರೆ. ಮರುಗಿದ್ದಾರೆ.

`ದಯವಿಟ್ಟು ಇಂತಹ ಸಾಹಸಕ್ಕೆ ಕೈ ಹಾಕಬೇಡಿ. ನನಗೆ ಇವೆಲ್ಲ ಇಷ್ಟವಾಗಲ್ಲ. ಮೊದಲ ಬಾರಿ ನಡೆದಿದೆ ಎಂಬ ಕಾರಣಕ್ಕೆ ಬಂದಿದ್ದೇನೆ. ಇದೇ ಕೊನೆ. ಇನ್ನು ಮುಂದೆ ನನ್ನ ಅಭಿಮಾನಿಗಳು ಈ ರೀತಿ ಮಾಡಿಕೊಂಡರೆ ನಾನು ಬರಲ್ಲ. ರವಿ ಅವರ ತಂದೆಯವರಲ್ಲಿ ನಾನು ಕ್ಷಮೆ ಕೇಳುತ್ತೇನೆ. ನೀವೇನು ಮಾಡೋಕಾಗುತ್ತೆ ಬಿಡಿ ಸರ್ ಎಂದರು. ಅದು ಅವರ ದೊಡ್ಡತನ. ನಮ್ಮ ಸಿನಿಮಾ ನೋಡಿ. ಒಳ್ಳೆಯದನ್ನು ಕಲಿಯಿರಿ. ಇಂತಹ ಅನಾಹುತ ಮಾಡಿಕೊಳ್ಳಬೇಡಿ'' ಎಂದು ಮನವಿ ಮಾಡಿದ್ದಾರೆ ಯಶ್.

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images