` 200 ಕೋಟಿ ಕ್ಲಬ್ ಸೇರುತ್ತಾ ಕೆಜಿಎಫ್..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kgf inches towards 200 crore mark
KGF

ರಿಲೀಸ್ ಆದ ದಿನದಿಂದಲೂ ಬಾಕ್ಸಾಫೀಸ್‍ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್, 200 ಕೋಟಿ ಕ್ಲಬ್ ಸೇರುತ್ತಾ..? ಬಾಕ್ಸಾಫೀಸ್ ಪಂಡಿತರು ಇಂಥಾದ್ದೊಂದು ಲೆಕ್ಕಾಚಾರ ಹೇಳುತ್ತಿದ್ದಾರೆ. ಏಕೆಂದರೆ, ಚಿತ್ರ ಈಗಾಗಲೇ 175 ಕೋಟಿ ಕಲೆಕ್ಷನ್ ದಾಟಿದೆಯಂತೆ.

ಹಿಂದಿಯಲ್ಲಿ 33 ಕೋಟಿ ಬಾಚಿ ಮುನ್ನುಗ್ಗುತ್ತಿರುವ ಕೆಜಿಎಫ್ ಸಿನಿಮಾ, ಕೇವಲ ಬುಕ್ ಮೈ ಶೋ ಒಂದರಲ್ಲಿಯೇ, ಅಧಿಕೃತ ಲೆಕ್ಕದ ಪ್ರಕಾರವೇ 80 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್‍ನಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಕೆಜಿಎಫ್, 200 ಕೋಟಿ ಕ್ಲಬ್ ದಾಟುವ ಸಾಧ್ಯತೆ ಇದೆ ಎಂದು ಬಾಲಿವುಡ್ ಪಂಡಿತರು ಭವಿಷ್ಯ ನುಡಿದಿದ್ದಾರೆ.