ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಅಡಿಯೋ ಲಾಂಚ್ ಅದ್ಧೂರಿಯಾಗಿ ನೆರವೇರಿದೆ. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅಪ್ಪು ಸಿನಿಮಾದ ಹಾಡುಗಳ ಬಿಡುಗಡೆಯಾಗಿದೆ.
ಐಟಿ ದಾಳಿ ಹಿನ್ನೆಲೆಯಲ್ಲಿ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಸಂಶಯಗಳಿದ್ದವು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಮಾರಂಭಕ್ಕೆ ಬರಲು ಸಾಧ್ಯವಾಗಲಿಲ್ಲ. ಪುನೀತ್ ಕಾರ್ಯಕ್ರಮಕ್ಕೆ ಆಗಮಿಸಿದ್ದಷ್ಟೇ ಅಲ್ಲ, ಅದ್ಭುತ ಡ್ಯಾನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ರು.
ಪುನೀತ್ ಜೊತೆ ಅಷ್ಟೇ ಅದ್ಭುತವಾಗಿ ಹೆಜ್ಜೆ ಹಾಕಿದ ರಚಿತಾ ರಾಮ್, ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ್ರು. ನಿರೂಪಕಿ ಅನುಶ್ರೀ ಅವರ ಉತ್ತರ ಕರ್ನಾಟಕ ಶೈಲಿಯ ನಿರೂಪಣೆ ಗಮನ ಸೆಳೆಯಿತು.
ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ, ರಿಲೀಸ್‍ಗೆ ರೆಡಿಯಾಗಿದ್ದು, ಪ್ರಚಾರದ ಕೆಲಸಕ್ಕೆ ಆಡಿಯೋ ಲಾಂಚ್ ಮೂಲಕ ಮುಂದಾಗಿದೆ ಚಿತ್ರತಂಡ.