` ಹಿರಣ್ಯಕಶಿಪು ಅವತಾರದಲ್ಲಿ ನವೀನ್ ಕೃಷ್ಣ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
naveen krishna to act as hiranyakashiphu
Naveen Krishna To Act As HiranyaKshiphu

ಆ್ಯಕ್ಟರ್ ಚಿತ್ರದ ನಂತರ ವಿಭಿನ್ನ ಪಾತ್ರ, ನಿರ್ದೇಶನ, ಸಂಭಾಷಣೆಯಲ್ಲಿ ಗುರುತಿಸಿಕೊಳ್ಳುತ್ತಿರುವ ಕಲಾವಿದ ನವೀನ್ ಕೃಷ್ಣ, ಈಗ ಹಿರಣ್ಯಕಶಿಪುವಾಗಿ ಆರ್ಭಟಿಸಲು ಸಿದ್ಧರಾಗಿದ್ದಾರೆ. ಹಿರಣ್ಯಕಶಿಪು ಎಂದರೆ ಥಟ್ಟನೆ ನೆನಪಾಗುವುದು ಡಾ.ರಾಜ್ ಕುಮಾರ್. ಅವರ ಆ ರಾಕ್ಷಸ ನಡಿಗೆ, ಬೆಂಕಿಯುಗುಳುವ ಕಣ್ಣುಗಳು, ಕಂಚಿನ ಕಂಠದಂತಹ ಧ್ವನಿ, ಹರಿಯನ್ನೇ ಕೊಲ್ಲುತ್ತೇನೆ ಎಂಬ ಆ ಹಠ, ಅಹಂಕಾರ.. ಹಿರಣ್ಯಕಶಿಪುವಿನ ಪಾತ್ರಕ್ಕೆ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದರು ಡಾ.ರಾಜ್.

ಆ ಪಾತ್ರದಲ್ಲೀಗ ನವೀನ್ ಕೃಷ್ಣ ನಟಿಸುತ್ತಿದ್ದಾರೆ. ಕಿರುತೆರೆಯ ಶ್ರೀವಿಷ್ಣು ದಶಾವತಾರ ಧಾರಾವಾಹಿಯಲ್ಲಿ ಹಿರಣ್ಯ ಕಶಿಪು ಅವತಾರದಲ್ಲಿ ಘರ್ಜಿಸಲು ಸಿದ್ಧರಾಗಿದ್ದಾರೆ.

`ಈ ಪಾತ್ರ ಮಾಡೋಕೆ ಅಣ್ಣಾವ್ರ ಪಾತ್ರವೇ ಸ್ಫೂರ್ತಿ ಎಂದಿದ್ದಾರೆ ನವೀನ್ ಕೃಷ್ಣ. ಪ್ರಹ್ಲಾದನ ಪಾತ್ರದಲ್ಲಿ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಅಚಿಂತ್ಯ ನಟಿಸುತ್ತಿದ್ದಾನೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery