ನೀವು ಎಂಗೇಜ್ ಆಗಿದ್ದೀರಂತೆ. ಕೈಲಿರೋ ಸಿನಿಮಾಗಳೆಲ್ಲ ಮುಗಿಸಿದ್ ಕೂಡ್ಲೇ ಮದ್ವೆ ಆಗ್ತಿದ್ದೀರಂತೆ. ನಿಮ್ಮ ಬಾಯ್‍ಫ್ರೆಂಡ್ ರಾಜಕಾರಣಿಯೊಬ್ಬರ ಮಗನಂತೆ. ನಮಗೂ ಹೇಳಲ್ವಾ.. ಹೀಗೆ ಇತ್ತೀಚೆಗೆ ರಚಿತಾ ರಾಮ್, ಹೋದಲ್ಲಿ.. ಬಂದಲ್ಲಿ.. ನಿಂತಲ್ಲಿ.. ಕೂತಲ್ಲಿ.. ಸಿಕ್ಕಲ್ಲೆಲ್ಲ ಅವರಿಗೆ ಇದೇ ಪ್ರಶ್ನೆ ಎದುರಾಗ್ತಾ ಇದೆ. ಅದಕ್ಕೆ ತಕ್ಕಂತೆ ಕೈತುಂಬಾ ಸಿನಿಮಾಗಳು. ಅಯೋಗ್ಯ ಮುಗಿಯುತ್ತಿದ್ದಂತೆ, ಸೀತಾರಾಮ ಕಲ್ಯಾಣ ರೆಡಿಯಾಗಿದೆ. ಐ ಲವ್ ಯೂ ತೆರೆಗೆ ಬರುತ್ತಿದೆ. ನಟಸಾರ್ವಭೌಮ ರಿಲೀಸ್‍ಗೆ ರೆಡಿಯಿದೆ. ಹೀಗಾಗಿ ಮಾಧ್ಯಮಗಳಿಗೆ ಸಿಗುತ್ತಲೇ ಇದ್ದಾರೆ ರಚಿತಾ ರಾಮ್. ಹೀಗೆ ಪದೇ ಪದೇ ಎದುರಾಗುವ ಪ್ರಶ್ನೆಗಳಿಗೆ ಮೊದ ಮೊದಲು ಗುಳಿಕೆನ್ನೆಯನ್ನು ಕೆಂಪು ಮಾಡಿಕೊಂಡು ನಗುನಗುತ್ತಲೇ ಉತ್ತರಿಸುತ್ತಿದ್ದ ರಚಿತಾ, ಈಗ ಬೇಸತ್ತು ಹೋಗಿದ್ದಾರೆ.
ನನಗೆ ಯಾರೂ ಬಾಯ್‍ಫ್ರೆಂಡ್ ಇಲ್ಲ. ಯಾರನ್ನೂ ನಾನು ಲವ್ ಮಾಡ್ತಾ ಇಲ್ಲ. ನನ್ನನ್ನು ಮದುವೆಯಾಗೋಕೆ ಯಾವ ರಾಜಕಾರಣಿಯೂ, ರಾಜಕಾರಣಿಯ ಮಗನೂ ನನ್ನ ಮನೆ ಬಾಗಿಲಿಗೆ ಬಂದಿಲ್ಲ. ನಾನು ಮದುವೆಗೆ ರೆಡಿ ಇದ್ದೇನೆ. ಎಂತಹ ಹುಡುಗ ಬೇಕು ಅನ್ನೋದು ನನ್ನ ತಂದೆ ತಾಯಿಗೆ ಗೊತ್ತು. ನನಗೂ ನನ್ನ ಮದುವೆ, ಗಂಡನ ಬಗ್ಗೆ ಕನಸು, ನಿರೀಕ್ಷೆಗಳಿವೆ. ಅದಕ್ಕೆ ತಕ್ಕಂತ ಹುಡುಗ ಬೇಕು. ಸದ್ಯಕ್ಕಂತೂ ನನ್ನ ಸಂಪೂರ್ಣ ಗಮನ ಸಿನಿಮಾ ಮೇಲಿದೆ. ಪದೇ ಪದೇ ನನ್ನ ಮದುವೆ ವಿಚಾರ ಕೆದಕಬೇಡಿ. ಸಾಧ್ಯವಾದರೆ, ನೀವೇ ಒಂದೊಳ್ಳೆ ಹುಡುಗನನ್ನು ತೋರಿಸಿ. ನೋಡೋಣ ಎಂದಿದ್ದಾರೆ ರಚಿತಾ ರಾಮ್.