ಸ್ಯಾಂಡಲ್ವುಡ್ನ ನಂ.1 ಡ್ಯಾನ್ಸರ್ ಯಾರು ಎಂದರೆ ಅನುಮಾನವೇ ಇಲ್ಲದಂತೆ ಕಣ್ಣ ಮುಂದೆ ಬರೋದು ಪುನೀತ್ ರಾಜ್ಕುಮಾರ್. ಅವರ ಪ್ರತಿ ಚಿತ್ರದಲ್ಲೂ ಒಂದಲ್ಲ ಒಂದು ವಿಶೇಷ ಸ್ಟೆಪ್ ಇದ್ದೇ ಇರುತ್ತೆ. ಈಗ ಅವರನ್ನೂ ಮೀರಿಸುವ ಸುಳಿವು ಕೊಡುತ್ತಾ ಬಂದಿದೆ ಯುವ ಕುಡಿ. ಇನ್ನು ಶಿವಣ್ಣನ ಡ್ಯಾನ್ಸ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ.
ರಾಘವೇಂದ್ರ ರಾಜ್ಕುಮಾರ್ ಅವರ 2ನೇ ಪುತ್ರ ಯುವ ರಾಜ್ ಕುಮಾರ್ ಅವರ ಡ್ಯಾನ್ಸ್, ಚಿಕ್ಕಪ್ಪ, ದೊಡ್ಡಪ್ಪ ಇಬ್ಬರನ್ನೂ ಮೀರಿಸುವಂತಿದೆ. ನಟಸಾರ್ವಭೌಮ ಚಿತ್ರದ ಪುನೀತ್ ಡ್ಯಾನ್ಸ್ಗೆ ಯುವರಾಜ್ ಕುಮಾರ್ ಸ್ಟೆಪ್ ಹಾಕಿದ್ದು, ಹುಬ್ಬೇರಿಸುವಂತಿದೆ. ಜನವರಿ 5ರಂದು ಹುಬ್ಬಳ್ಳಿಯಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವಿದ್ದು, ಆ ದಿನ ಯುವರಾಜ್ ಕುಮಾರ್ ಸ್ಟೇಜ್ ಮೇಲೆ ಶೋ ಕೊಡಲಿದ್ದಾರಂತೆ.
ಈಗಾಗಲೇ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಯುವರಾಜ್ ಕುಮಾರ್, ಸಮಾಜಸೇವೆ ಕಾರ್ಯಗಳಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಬಹಿರಂಗವಾಗಿ ಹೆಚ್ಚು ಕಾಣಿಸಿಕೊಳ್ಳದ ಯುವರಾಜ್, ಚಿಕ್ಕಪ್ಪನ ಬಹು ನಿರೀಕ್ಷೆಯ ಚಿತ್ರದ ಆಡಿಯೋ ರಿಲೀಸ್ನಲ್ಲಿ ಮಿಂಚಲಿದ್ದಾರೆ.