` ಸೆಕ್ಷನ್ 377 ಮತ್ತು 158 ವರ್ಷದ ಹೋರಾಟದ ಕಥೆ ಬೆಸ್ಟ್ ಫ್ರೆಂಡ್ಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
best friends is story about fight and struggle for sec 377 rights
Best Friends

ಬೆಸ್ಟ್ ಫ್ರೆಂಡ್ಸ್ ಚಿತ್ರದಲ್ಲಿರೋದು ಸಲಿಂಗ ಕಾಮದ ಕಥೆ. ಇತ್ತೀಚೆಗೆ ತಾನೇ, ದೇಶಾದ್ಯಂತ ನಡೆದ ಸಲಿಂಗಿಗಳ ಹೋರಾಟಕ್ಕೆ ಸುಪ್ರೀಂಕೋರ್ಟ್‍ನಲ್ಲಿ ಜಯ ಸಿಕ್ಕು, ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ಬಂದಿದೆ. ಪರಸ್ಪರ ಒಪ್ಪಿಗೆಯ ಸಲಿಂಗ ಕಾಮ ತಪ್ಪಲ್ಲ ಎಂದು ಕಾನೂನು ಹೇಳಿದರೂ, ಸಮಾಜ ಇನ್ನೂ ಅದನ್ನು ಸ್ವೀಕರಿಸಿಲ್ಲ. ಅಂಥಾದ್ದೊಂದು ವಿಶೇಷ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡುವ ಸಾಹಸ ಮಾಡಿರುವುದು ಟೇಶಿ ವೆಂಕಟೇಶ್.

ಜಗತ್ತಿನಲ್ಲಿ ಸಲಿಂಗ ಕಾಮ ತಪ್ಪಲ್ಲ ಎಂದು ಹೇಳಿರುವ ದೇಶಗಳ ಸಂಖ್ಯೆ 26 ಮಾತ್ರ. ಅವುಗಳಲ್ಲಿ ಈಗ ಭಾರತವೂ ಒಂದು. ಅಂತಹ ನಿಷಿದ್ಧ ಪ್ರೇಮಕಾಮದ ಜಗತ್ತನ್ನು ಭಾವನಾತ್ಮಕವಾಗಿ ತೆರೆ ಮೇಲೆ ತಂದಿದ್ದಾರೆ ಟೇಶಿ ವೆಂಕಟೇಶ್.

ಚಿತ್ರದ ಸಬ್ಜೆಕ್ಟ್ ಹಾಗಿದ್ದರೂ, ಅದೊಂದು ಪ್ರೇಮಕಥೆ, ಭಾವನಾತ್ಮಕವಾಗಿ ನೀವು ಸ್ಪಂದಿಸುತ್ತೀರಿ. ಅಶ್ಲೀಲತೆಯ ಸೋಂಕು ಎಲ್ಲಿಯೂ ಇಲ್ಲ ಎಂದು ಭರವಸೆ ಕೊಡ್ತಾರೆ ಟೇಶಿ ವೆಂಕಟೇಶ್.

ಲಯನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿ ನಟಿಸಿರುವುದು ದ್ರವ್ಯಾ ಶೆಟ್ಟಿ ಮತ್ತು ಮೇಘನಾ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery