ಎಷ್ಟೇ ಎಷ್ಟೇ ಪ್ರೀತಿಸ್ತೀಯಾ ನೀನು ನನ್ನ.. ತಿಳ್ಕೋ.. ಈ ಪ್ರೀತಿ ಪ್ರೇಮ ಎಲ್ಲ ಪುಸ್ತಕದ್ ಬದ್ನೇಕಾಯಿ..ಇದು ಎ ಚಿತ್ರದಲ್ಲಿ ಉಪ್ಪಿ ಹೇಳುವ ಡೈಲಾಗುಗಳು. ಅದೇ ಉಪ್ಪಿ.. ಡೈರೆಕ್ಟರ್ ಬೇರೆ.. ಚಿತ್ರ ಐ ಲವ್ ಯೂ. ಉಪ್ಪಿಗೆ ಆ ಡೈಲಾಗ್ ಹೇಳೋದು ರಚಿತಾ ರಾಮ್.
ಪ್ರೇಮ ಕಾಮ ಆ ಭಗವಂತನ ಡ್ರಾಮ.. ಎಂದು ಶುರುವಾಗುವ ಐ ಲವ್ ಯೂ ಟ್ರೇಲರ್, ನೋಡ್ತಾ ನೋಡ್ತಾ ನೋಡುಗರಿಗೆ ಶಾಕ್ ಕೊಡುತ್ತಾ ಹೋಗುತ್ತೆ. ಚಿತ್ರದ ಕಥೆ ಏನು.. ಎಂಬ ಕುತೂಹಲ ಹುಟ್ಟುತ್ತೆ. ಇದು ಉಪ್ಪಿ ಸಿನಿಮಾನೋ.. ಚಂದ್ರು ಸಿನಿಮಾನೋ ಎಂಬ ಪ್ರಶ್ನೆ ಹುಟ್ಟುತ್ತೆ. ರಚಿತಾ ರಾಮ್ ರಗಡ್ ಲುಕ್‍ನಲ್ಲಿ ಬೆಚ್ಚಿಬೀಳಿಸ್ತಾರೆ. ರಗಡ್ ಲುಕ್ ಅಂದ್ರೆ, ಆ ಮಾಸ್ ಡೈಲಾಗ್ಸ್.
ಇಷ್ಟೆಲ್ಲ ಡೈಲಾಗುಗಳ ನಂತರ ಉಪ್ಪಿ, ರೋಸ್ ತಗೊಂಡ್ ಹೋಗ್ತಾನೆ.. ಐ ಲವ್ ಯೂ ಹೇಳೋಕೆ.. ಯಾರಿಗೆ.. ಏಕೆ.. ಅಲ್ಲಿ ಏನ್ ನಡೆಯುತ್ತೆ.. ರೋಸ್ ತಗೊಂಡ್ ಹೋಗಿ ಐ ಲವ್ ಯೂ ನೇ ಹೇಳ್ತಾನಾ.. ಅಥವಾ..?????
ಸ್ಟಾಪ್. ಫೆಬ್ರವರಿ 14ಕ್ಕೆ ರಿಲೀಸ್ ಆಗ್ತಿದೆ. ವ್ಯಾಲೆಂಟೈನ್ಸ್ ಡೇಗೆ. ಆ ದಿನ ಉತ್ತರ ಸಿಗುತ್ತೆ.