ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಪವನ್ ಒಡೆಯರ್, ಯೋಗರಾಜ್ ಭಟ್, ವಿಜಯ್ ಪ್ರಕಾಶ್, ಡಿ.ಇಮ್ಮಾನ್.. ಇವ್ರೆಲ್ಲ ಸೇರ್ಕೊಂಡು ಹೊಸ ವರ್ಷದ ಕಿಕ್ಕೇರಿಸಿಬಿಟ್ಟಿದ್ದಾರೆ. ನಟಸಾರ್ವಭೌಮ ಚಿತ್ರದ ಓಪನ್ ದ ಬಾಟಲ್ ಹಾಡಿನ ಲಿರಿಕಲ್ ವಿಡಿಯೋ ಹೊರ ಬಿಟ್ಟಿದೆ ರಾಕ್‍ಲೈನ್ ಪ್ರೊಡಕ್ಷನ್ಸ್. ಹಾಡು ಕಿಕ್ಕೇರಿಸುವಂತಿದೆ.
ಏಳೂವರೆ ತುಟಿ ಒಣಗತೈತೆ ಏನ್ ಮಾಡಣ.. ಹಾಳು ಎಣ್ಣಿ ಚಟ ಬಿಡಬೇಕು.. ಕಮ್ಮಿ ಕುಡ್ಯಣ.. ಎಣ್ಣೆ ಬಿಡೋದಕ್ಕೆ ಇಟ್ಟಿರೋ ಪಾರ್ಟಿ ಇದು.. ಫ್ರೆಂಡ್ಸೆಲ್ಲ ಕೈ ಹಾಕ್ರಿ.. ಜೋಡಿಸ್ರೋ ಟೇಬಲ್.. ಓಪನ್ ದ ಬಾಟಲ್.. ಎಂದು ಶುರುವಾಗುವ ಹಾಡಿನಲ್ಲಿ ಮೈಮರೆತು ಕುಣಿಯೋಕೆ ಬೇಕಾದ ಎಲ್ಲ ಸರಕುಗಳೂ ಇವೆ.
ಹಾಡು ಕೇಳೋಕಷ್ಟೇ ಅಲ್ಲ, ನೋಡೋಕೂ ಮಜವಾಗಿದೆ. ಪುನೀತ್ ಚಿಂದಿಯಾಗಿ ಕುಣಿದಿದ್ದಾರೆ. ಅವರು ಇದುವರೆಗೂ ಅಂತಹ ಸ್ಟೆಪ್ಪುಗಳನ್ನು ಹಾಕಿಯೇ ಇಲ್ಲ. ವಿಡಿಯೋನೂ ಬಿಡ್ತೇವೆ ನೋಡ್ತಾ ಇರಿ ಎಂದು ಆಸೆಯ ಕಿಕ್ಕು ಕೊಟ್ಟಿದ್ದಾರೆ ಪವನ್ ಒಡೆಯರ್.