ಕೆಜಿಎಫ್ ಚಿತ್ರ ಇಡೀ ದೇಶವನ್ನು ಸಮ್ಮೋಹನಗೊಳಿಸಿದೆ. ಸಹಜವಾಗಿಯೇ ಕೆಜಿಎಫ್, ತೆಲುಗು ಸ್ಟಾರ್ ನಟ ಪ್ರಭಾಸ್‍ರನ್ನೂ ಆಕರ್ಷಿಸಿದೆ. ಚಿತ್ರ ನೋಡಿದ ಪ್ರಭಾಸ್‍ಗೆ ಇಷ್ಟವಾಗಿರೋದು ನಿರ್ದೇಶಕ ಪ್ರಶಾಂತ್ ನೀಲ್. ಹೀಗಾಗಿ ತಮಗೊಂದು ಸಿನಿಮಾ ಮಾಡಿಕೊಡಿ ಎಂದು ಪ್ರಭಾಸ್, ಪ್ರಶಾಂತ್ ನೀಲ್‍ರನ್ನು ಕೇಳಿಕೊಂಡಿದ್ದಾರಂತೆ.
ಪ್ರಭಾಸ್ ಅವರ ಯುವಿ ಕ್ರಿಯೇಷನ್ಸ್‍ನಲ್ಲೇ ಪ್ರಭಾಸ್‍ರ ಮುಂದಿನ ಸಿನಿಮಾ ನಿರ್ಮಾಣವಾಗಲಿದೆ. ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನಲಾಗಿದೆ.
ಪ್ರಶಾಂತ್ ನೀಲ್ ಅವರ ಬಗ್ಗೆ ಪ್ರಭಾಸ್ ಬಳಿ ಸ್ವತಃ ರಾಜಮೌಳಿ ಶಿಫಾರಸು ಮಾಡಿದ್ದಾರೆ ಎನ್ನುವುದು ತೆಲುಗು ಚಿತ್ರರಂಗದಿಂದ ತೇಲಿ ಬರುತ್ತಿರುವ ಸುದ್ದಿ. ಸುದ್ದಿಯನ್ನು ಇದುವರೆಗೆ ಪ್ರಶಾಂತ್ ನೀಲ್ ಕನ್‍ಫರ್ಮ್ ಮಾಡಿಲ್ಲ.