` ಅಂಕಲ್ ಲೋಕನಾಥ್ ಇನ್ನಿಲ್ಲ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
veteran actor lokanath no more
Lokanath

ಹಿರಿಯ ನಟ, ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉಪ್ಪಿನಕಾಯಿ ಎಂದೇ ಹೆಸರಾಗಿದ್ದ ಲೋಕನಾಥ್ ನಿಧನರಾಗಿದ್ದಾರೆ. ಮಧ್ಯರಾತ್ರಿ 12.15ಕ್ಕೆ ಕೊನೆಯುಸಿರೆಳೆದಿದ್ದಾರೆ. ಲೋಕನಾಥ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. 2018ರ ಕೊನೆಯ ದಿನ ಚಿತ್ರರಂಗಕ್ಕೆ ಲೋಕನಾಥ್ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಎರಗಿದೆ.

ಲೋಕನಾಥ್ ಮೂಲತಃ ರಂಗಭೂಮಿ ಕಲಾವಿದ. ರವಿ ಕಲಾವಿದರು, ನಟರಂಗ, ಸಮುದಾಯ, ಸೂತ್ರಧಾರ ಸೇರಿದಂತೆ ಹಲವು ತಂಡಗಳಲ್ಲಿ 1000ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದವರು. 650ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಲೋಕನಾಥ್‍ಗೆ, ಭೂತಯ್ಯನ ಮಗ ಅಯ್ಯು, ಮಿಂಚಿನ ಓಟ ಚಿತ್ರಗಳು ಹೆಸರು ತಂದುಕೊಟ್ಟಿದ್ದವು. ಭೀಮಾತೀರದಲ್ಲಿ.. ಲೋಕನಾಥ್ ಅಭಿನಯದ ಕೊನೆಯ ಚಿತ್ರವಿರಬೇಕು. 

ಆಗಸ್ಟ್ 8, 1929, ಲೋಕನಾಥ್ ಅವರ ಜನ್ಮದಿನ. ಸ್ವಾತಂತ್ರ್ಯ ಹೋರಾಟವನ್ನೂ ಕಣ್ಣಾರೆ ಕಂಡಿದ್ದ ಲೋಕನಾಥ್, ಚಿತ್ರರಂಗವನ್ನು ಬಿಟ್ಟು ಅಗಲಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery