ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 2019ರ ಆರಂಭದಲ್ಲೇ ತೆರೆಗೆ ಬರುವುದು ಅಧಿಕೃತವಾಗಿದೆ. ನಟಸಾರ್ವಭೌಮ ಚಿತ್ರದ ಬಿಡುಗಡೆಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಜನವರಿ 5ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಸಿನಿಮಾ ರಿಲೀಸ್ ಆಗುವುದು ಫೆಬ್ರವರಿ 7ನೇ ತಾರೀಕಿಗೆ. ಅಂದರೆ, ಆಡಿಯೋ ರಿಲೀಸ್ ಆದ ಬರೋಬ್ಬರಿ 1 ತಿಂಗಳ ಚಿತ್ರ, ಪ್ರೇಕ್ಷಕರ ಎದುರು ಬರಲಿದೆ. ಕಳೆದ ವರ್ಷವಿಡೀ ಪುನೀತ್ ಸಿನಿಮಾ ಇರಲಿಲ್ಲ. ಹೀಗಾಗಿ ಅಪ್ಪು ಅಭಿಮಾನಿಗಳ ನಿರೀಕ್ಷೆ ಆಕಾಶದಲ್ಲಿದೆ.
ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ರಚಿತಾ ರಾಮ್ ಮತ್ತೊಮ್ಮೆ ಅಪ್ಪು ಜೋಡಿಯಾಗಿದ್ದರೆ, ಅನುಪಮಾ ಪರಮೇಶ್ವರ್ ಗಮನ ಸೆಳೆಯುತ್ತಿದ್ದಾರೆ. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ತೆರೆ ಮೇಲೆ ಬರುತ್ತಿದ್ದಾರೆ. ಅಪ್ಪು ಜೊತೆ ಡ್ಯಾನ್ಸ್ ಮಾಡೋಕೆ ಸಿದ್ಧರಾ