ಈ ತಿಂಗಳು ಎರಡು ಸಿನಿಮಾಗಳು ರಿಲೀಸ್ ಆಗ್ತಿವೆ. ಒಂದು ಕೆಜಿಎಫ್. ಇನ್ನೊಂದು ಸ್ವಾರ್ಥರತ್ನ. ಅರೆ.. ಕೆಜಿಎಫ್‍ಗೂ, ಸ್ವಾರ್ಥರತ್ನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂದುಕೊಳ್ಳಬೇಡಿ. ಚಿತ್ರದ ಪ್ರಚಾರವನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿದೆ.
ಕೆಜಿಎಫ್‍ನಲ್ಲಿನ ಡೈಲಾಗ್ ಇದ್ಯಲ್ಲ.. ಅವನು ಹೊರಟ.. ಎಂಬ ಡೈಲಾಗ್‍ನ್ನೂ ಸ್ವಾರ್ಥರತ್ನದಲ್ಲಿ ಯಥಾವತ್ತು ಬಳಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ..
ಅಣ್ಣಾ.. ನಮ್ ಫಿಲ್ಮ್‍ಲ್ಲಿ ಎಂಟರ್‍ಟೈನ್‍ಮೆಂಟ್ ಇದೆ..
ರೊಮ್ಯಾನ್ಸ್ ಇದೆ..
ನಮ್ ಫಿಲಂನಲ್ಲಿ ಎಮೋಷನಲ್ ಇದೆ.. ಕಾಮಿಡಿ ಇದೆ..
ಹುಡುಗರಿಗಾಗಿ ಐಟಮ್ಮೂ ಇದ್ಯಂತೆ..
ಹಾಡು ವೈರಲ್ಲೂ ಆಗಿದೆ..
ಹೀಗೆ.. ತಮ್ಮ ಚಿತ್ರದಲ್ಲಿ ಏನೇನೆಲ್ಲ ಇದೆ ಎಂದು ವೀಕ್ಷಕರಿಗೆ ಎಲ್ಲ ಐಟಂಗಳ ಒಂದು ಝಲಕ್ ತೋರಿಸಿಯೇ ಥಿಯೇಟರ್‍ಗೆ ಬರುತ್ತಿದ್ದಾನೆ ಸ್ವಾರ್ಥರತ್ನ. ಹರಸುತ್ತಾನಾ ಪ್ರೇಕ್ಷಕರತ್ನ..