ಆ ಹೀರೋ ಎಂಥವನೆಂದರೆ, ಮನಸಾರೆ.. ತಾನಾಗಿ ಕೈ ಎತ್ತಿ ಯಾರಿಗೂ ಒಂದು ಕೊಡುಗೆ ಕೊಟ್ಟವನಲ್ಲ. ಕೊಡುವವನೂ ಅಲ್ಲ. ಅಷ್ಟೊಂದು ಸ್ವಾರ್ಥಿ. ಅಂತಹವನು ಲವ್ ಮಾಡ್ತಾನೆ. ಆದರೆ, ಹೃದಯ ಕೊಡಬೇಕಲ್ಲ. ಹೃದಯ ಕೊಡುತ್ತಾನಾ..? ಅಲ್ಲೇ ಇರೋದು ಮಜಾ.. ಸ್ವಾರ್ಥರತ್ನನ ಕಥೆಯ ಕಾಮಿಡಿ ಇರೋದೇ ಅಲ್ಲಿ..
ಒಂದು ರೊಮ್ಯಾಂಟಿಕ್ ಕಾಮಿಡಿಯನ್ನು ಅಷ್ಟೇ ಮಜಭೂತಾಗಿ ಹೇಳಿದ್ದಾರೆ ನಿರ್ದೇಶಕ ಅಶ್ವಿನ್ ಕೋಡಂಗೆ. ಫಸ್ಟ್ ರ್ಯಾಂಕ್ ರಾಜು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ಅಶ್ವಿನ್ ಪ್ರಕಾರ, ಈ ಚಿತ್ರಕ್ಕೆ ಆದರ್ಶ್ ಗುಂಡೂರಾಜ್ ಬಿಟ್ಟರೆ, ಬೇರೆಯವರನ್ನು ಕಲ್ಪಿಸಿಕೊಳ್ಳೋಕೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಪರಕಾಯ ಪ್ರವೇಶ ಮಾಡಿದ್ದಾರೆ. ರೋವನ್ ಅಟ್ಕೆನ್ಸನ್, ಮಿಸ್ಟರ್ ಬೀನ್ ಪಾತ್ರದಲ್ಲಿ ಲೀನವಾದಂತೆ ಲೀನವಾಗಿದ್ದಾರೆ.
ಇಶಿತಾ ವರ್ಷ, ಸ್ನೇಹಾ ಸಿಂಗ್ ನಾಯಕಿಯರು. ಚಿತ್ರತಂಡದಲ್ಲಿರುವ ಮೋಸ್ಟ್ ಸೀನಿಯರ್ ಕಲಾವಿದ ಸಾಧುಕೋಕಿಲ.