` ಸ್ಯಾಟಲೈಟ್, ಡಿಜಿಟಲ್ ರೈಟ್ಸ್‍ನಲ್ಲೂ ಕೆಜಿಎಫ್‍ಗೆ ಬಂಪರ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kgf records in satellte and digital marketing
KGF

ಕೆಜಿಎಫ್ ದೇಶ, ವಿದೇಶಗಳಲ್ಲಿ ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿದ್ದರೆ, ಇತ್ತ ಚಿತ್ರದ ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್‍ನಲ್ಲೂ ದಾಖಲೆ ಬರೆದಿದೆ. ಮೂಲಗಳ ಪ್ರಕಾರ, ಅಮೇಜಾನ್ ಪ್ರೈಮ್ ಕೆಜಿಎಫ್ ಇಂಟರ್‍ನೆಟ್ ಅಂದರೆ ಡಿಜಿಟಲ್ ಹಕ್ಕನ್ನು 18 ಕೋಟಿ ರೂ. ಕೊಟ್ಟು ಖರೀದಿಸಿದೆ. ನೆಟ್‍ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ನಡುವಣ ಪೈಪೋಟಿಯಲ್ಲಿ ಗೆದ್ದಿರುವುದು ಅಮೇಜಾನ್ ಪ್ರೈಮ್.

ಇನ್ನು ಚಿತ್ರದ ಕನ್ನಡ ಸ್ಯಾಟಲೈಟ್ ಹಕ್ಕನ್ನು ಕಲರ್ಸ್ ಕನ್ನಡ ಭಾರಿ ಮೊತ್ತಕ್ಕೆ ಖರೀದಿಸಿದ್ದರೆ, ಹಿಂದಿ ಹಕ್ಕನ್ನು ಸೋನಿ ಖರೀದಿಸಿದೆ. ತೆಲುಗು, ತಮಿಳು ಹಾಗೂ ಮಲಯಾಳಂ ರೈಟ್ಸ್‍ಗಳು ಬೇರೆ ಬೇರೆ ಚಾನೆಲ್ ಪಾಲಾಗಿವೆ. 

ಒಂದು ಲೆಕ್ಕಾಚಾರದ ಪ್ರಕಾರ, ಕೆಜಿಎಫ್‍ಗೆ ಹಾಕಿದ್ದ ಬಂಡವಾಳ, ಕೇವಲ ಸ್ಯಾಟಲೈಟ್, ಡಿಜಿಟಲ್ ಹಕ್ಕುಗಳ ಮಾರಾಟದಿಂದಲೇ ವಾಪಸ್ ಬಂದುಬಿಟ್ಟಿದೆ. ಥಿಯೇಟರ್‍ನಲ್ಲಿ ಬರುತ್ತಿರುವುದೆಲ್ಲವೂ ನಿರ್ಮಾಪಕರಿಗೆ ಬೋನಸ್.