ವಿಭಿನ್ನ ಪ್ರಯತ್ನಗಳಿಂದಲೇ ಯಶಸ್ಸನ್ನೂ ಪಡೆದು, ಹೆಸರು ಮಾಡುತ್ತಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೀಗೂ ಸಿನಿಮಾ ಮಾಡಿ ಗೆಲ್ಲಬಹುದು ಎಂದು ತೋರಿಸಿಕೊಟ್ಟ, ಹೊಸ ಜಾನರೆ ಸೃಷ್ಟಿಸಿದ ಸಿಂಪಲ್ ಸುನಿ, ಪ್ರೇಕ್ಷಕರನ್ನು ಡಿಸೈನ್ ಡಿಸೈನಾಗಿ ನಗಿಸಿ ಗೆಲ್ಲುತ್ತಿರುವ ಶರಣ್.. ಈ ಮೂವರೂ ಒಂದಾಗಿದ್ದಾರೆ. ಹೊಸ ಚಿತ್ರ ಮಾಡುತ್ತಿದ್ದಾರೆ.
ಚಿತ್ರಕ್ಕೆ ಮಹಾಭಾರತದ ತ್ರಿಶಂಕು ಕಥೆಯೇ ಸ್ಫೂರ್ತಿ. ಸುನಿ ಮತ್ತು ಶರಣ್ ಜೊತೆ ಸಿನಿಮಾ ಮಾಡುತ್ತಿರುವುದಕ್ಕೆ ಭಾರಿ ಖುಷಿ ಇದೆ ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.
ಕಾಮಿಡಿ ಕಥೆಯೇ ಆದರೂ, ಇದು ನನ್ನ ರೆಗ್ಯುಲರ್ ಸಿನಿಮಾ ಅಲ್ಲ. ನನಗೆ ಇದೊಂದು ಸವಾಲಿನ ಪಾತ್ರ ಎಂದಿದ್ದಾರೆ ಶರಣ್. ಮಹಾಭಾರತದ ಕಥೆಯನ್ನಿಟ್ಟುಕೊಂಡು ಒಂದು ಮಜವಾದ ಕಥೆ ಹೇಳುತ್ತಿದ್ದೇನೆ ಎಂದಿದ್ದಾರೆ ಸುನಿ.
ಜನವರಿ 16ಕ್ಕೆ ಆ ಸಿನಿಮಾ ಸೆಟ್ಟೇರುತ್ತಿದೆ. ಜನವರಿ 20ಕ್ಕೆ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.