ತಲೆ ಮೇಲೆ ಮುಖ ಕಾಣದಂತೆ ಮಂಕಿ ಕ್ಯಾಪ್, ಲುಂಗಿ, ಹವಾಯ್ ಚಪ್ಪಲಿ ಹಾಕ್ಕೊಂಡು ಗಾಂಧಿ ಕ್ಲಾಸ್‍ನಲ್ಲಿ ತಮ್ಮ ಜೊತೆ ಸಿನಿಮಾ ನೋಡುತ್ತಿರುವುದು ಸ್ಟಾರ್ ನವರಸನಾಯಕ ಜಗ್ಗೇಶ್ ಎಂದು ಪಕ್ಕದಲ್ಲಿದ್ದವರಿಗೆ ಗೊತ್ತಿರಲಿಲ್ಲ. ತಮ್ಮ ಜೊತೆಯೇ ಟೀ, ಖಾರಾಪುರಿ ತಿಂದಿದ್ದು ಜಗ್ಗಣ್ಣ ಅನ್ನೋದು ಗೊತ್ತಾಗಲೇ ಇಲ್ಲ. ಗೊತ್ತಾಗಿದ್ದರೂ, ಇವರೇಕೆ ಗಾಂಧಿ ಕ್ಲಾಸ್‍ನಲ್ಲಿ ಬಂದು ಸಿನಿಮಾ ನೋಡ್ತಾರೆ ಬಿಡಿ.. ಏನೋ.. ಕನ್‍ಫ್ಯೂಸ್ ಆಗಿರಬೇಕು ಎಂದು ಸುಮ್ಮನಾಗುತ್ತಿದ್ದರೇನೋ..
ಆದರೆ, ಅದು ನಿಜವಾಗಿಹೋಗಿದೆ. ಜಗ್ಗೇಶ್ ಹಾಗೆ ಮಾರುವೇಷದಲ್ಲಿ ಹೋಗಿ ನೋಡಿರೋ ಸಿನಿಮಾ ಕೆಜಿಎಫ್. ಅದೂ ಗಾಂಧಿ ಕ್ಲಾಸ್‍ನಲ್ಲಿ. 38 ವರ್ಷಗಳ ಹಿಂದೆ ನಾನು ಹೀಗೇ ಸಿನಿಮಾ ನೋಡುತ್ತಿದ್ದೆ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ ಜಗ್ಗೇಶ್. ಯಶ್‍ರನ್ನು ಹೊಗಳಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಪ್ರತಿಭೆಯನ್ನು ಕೊಂಡಾಡಿದ್ದಾರೆ.