ಒಂದು ಚಿತ್ರವನ್ನು ಚಿತ್ರೋದ್ಯಮದವರು ಹೊಗಳುವುದು ಬೇರೆ. ರಾಜಕಾರಣಿಗಳು ಹೊಗಳುವುದು ಬೇರೆ. ಕೆಜಿಎಫ್‍ಗೆ ಈಗ ದೇಶಾದ್ಯಂತ ಚಿತ್ರರಸಿಕರಿಂದ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಕರ್ನಾಟಕದಿಂದ ಹೊರಟ ಸಿನಿಮಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಹಿಂದಿಯಲ್ಲೂ ಮೋಡಿ ಮಾಡುತ್ತಿದೆ. ಬಾಕ್ಸಾಫೀಸ್‍ನಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಿದೆ. ಎಲ್ಲ ಚಿತ್ರೋದ್ಯಮದ ಸೆಲಬ್ರಿಟಿಗಳೂ ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಹೀಗಿರುವಾಗಲೇ, ರಾಜ್ಯದ ಉಪಮುಖ್ಯಮಂತ್ರಿ ಪರಮೇಶ್ವರ್, ಕೆಜಿಎಫ್‍ನ್ನು ಹೊಗಳಿದ್ದಾರೆ.
ಕನ್ನಡದ ಗಡಿ ದಾಟಿ ಹೋಗಿರುವ ಕೆಜಿಎಫ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ ಡಿಸಿಎಂ ಪರಮೇಶ್ವರ್.
ನಿಮ್ಮ ಹಾರೈಕೆ, ನಮ್ಮ ಮುಂದಿನ ಪ್ರಯತ್ನಗಳಿಗೆ ಉತ್ಸಾಹ ತುಂಬಿದೆ ಸರ್ ಎಂದು ಧನ್ಯವಾದ ಅರ್ಪಿಸಿದ್ದಾರೆ ಯಶ್. ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ ಪರಮೇಶ್ವರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.