` ಹೊಂಗೆಮರದ ಶೃಂಗಾರದಲ್ಲಿ.. ಯೋಗರಾಜ್ ಭಟ್ಟರ ಸೌಂದರ್ಯ ಸಮರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yogaraj bhatt's hongemaradha sringaradhalli song
Panchatantra Video Song

ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ.. ನಾಚಿಕೆಯು ನನ್ನಾ ಜೊತೆ ಠೂ ಬಿಟ್ಟಿದೆ.. ಎಂಬ ಸಾಲುಗಳ ಮೂಲಕವೇ ಶೃಂಗಾರದ ಪರಾಕಾಷ್ಠೆಗೆ ಕೊಂಡೊಯ್ದಿದ್ದ ಭಟ್ಟರು, ಈಗ ಹಾಡಿನ ಲಿರಿಕಲ್ ವಿಡಿಯೋದಲ್ಲೂ ಶೃಂಗಾರಧಾರೆಯನ್ನೇ ಸುರಿಸಿಬಿಟ್ಟಿದ್ದಾರೆ. ಅದು ಅದ್ಭುತ ಎನ್ನಿಸುವ ಪೇಂಟಿಂಗುಗಳ ಮೂಲಕ.

ಇದುವರೆಗೆ ಯಾರೂ ಇಂತಹದ್ದೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಆದರೆ, ಭಟ್ಟರೇ ಬೇರೆ.. ಭಟ್ಟರ ಸ್ಟೈಲೇ ಬೇರೆ.. ಭಟ್ಟರ ಶೃಂಗಾರವೂ ಬೇರೆ.. ಹೀಗಾಗಿಯೇ ಪಂಚತಂತ್ರ ಚಿತ್ರದ ಈ ಹಾಡಿನ ಜೊತೆ 4 ಪೇಂಟಿಂಗ್ ಹೊರತಂದಿದ್ದಾರೆ ಭಟ್ಟರು. ಆ ಪೇಂಟಿಂಗುಗಳ ಮೇಲೆ ಹಾಡಿನ ಸಾಹಿತ್ಯವೂ ಇರಲಿದೆ. 

ಹಾಡು ಓದಿಕೊಳ್ಳೋದಾ.. ಪೇಂಟಿಂಗ್ ನೋಡಿ ಶೃಂಗಾರದ ಹೂವು ಅರಳಿಸೋದಾ.. ಕಲ್ಪನೆಯ ಶೃಂಗಾರ ಲೋಕದಲ್ಲಿ ಏರಿ ಹೋಗೋದ.. ಅದು ಚಿತ್ರರಸಿಕರಿಗೆ ಬಿಟ್ಟ ಮಾತು.

ವಿಹಾನ್ ಮತ್ತು ಸೋನಲ್ ಅಷ್ಟೇ ಅದ್ಭುತವಾಗಿ ನಟಿಸಿದ್ದಾರಂತೆ. ಆ ಶೃಂಗಾರ ಕಾವ್ಯವನ್ನು ನೋಡಲು ಚಿತ್ರ ಬಿಡುಗಡೆವರೆಗೂ ಕಾಯಬೇಕಂತೆ.