ಸ್ವಾರ್ಥ ರತ್ನ ಚಿತ್ರದಲ್ಲಿ ಹಿಟ್ ಆಗಿರೋದು ನಿನ್ನ ನಯನ.. ಅನ್ನೋ ಗೀತೆ. ಈ ಹಾಡು ಕೇವಲ ಪದಗಳ ಆಟದಿಂದಷ್ಟೇ ಇಷ್ಟವಾಗಿಲ್ಲ. ಚಿತ್ರದಲ್ಲಿ ಆ ಹಾಡನ್ನು ಚಿತ್ರೀಕರಿಸಿರುವ ರೀತಿಯೂ ಪ್ರೇಕ್ಷಕರಿಗೆ ಹೊಸತನ ಎನ್ನಿಸಿದೆ.
ಡಾ.ರಾಜ್ ಬೆಸ್ಟ್ ಚಿತ್ರಗಳಲ್ಲಿಯೇ ಕಸ್ತೂರಿ ನಿವಾಸ ಬೆಸ್ಟ್ ಆಫ್ ದಿ ಬೆಸ್ಟ್. ಆ ಚಿತ್ರದಲ್ಲಿ ನೀ ಬಂದು ನಿಂತಾಗ.. ನಿಂತು ನೀ ನಕ್ಕಾಗ.. ಹಾಡು ನೋಡಿದ್ದೀರಲ್ಲ.. ನಿನ್ನ ನಯನ ಹಾಡು ಇರುವುದು ಅದೇ ಸ್ಟೈಲ್‍ನಲ್ಲಿ. ಹೀಗಾಗಿಯೇ ಈ ಹಾಡು ಇಷ್ಟವಾಗಿರೋದು.
ಇಶಿತಾ ಮತ್ತು ಆದರ್ಶ್ ನಡುವಿನ ನಯನಮನಗಳ ಆಟವನ್ನು ಅಶ್ವಿನ್ ಚೆನ್ನಾಗಿ ಆಡಿಸಿದ್ದಾರೆ. ನೋಡುವಾಗ ಮುಖದ ಮೇಲೊಂದು ಮುಗುಳ್ನಗೆ ಇರುತ್ತೆ. ಇಡೀ ಚಿತ್ರದಲ್ಲಿ ಕಚಗುಳಿಯಿಡುವ ಕಿವಿತಂಪು ಮಾಡುವ ಸಂಭಾಷಣೆಗಳಿಗೆ ಬರವಿಲ್ಲ. ಹಾಸ್ಯಕ್ಕೆ ಕೊನೆಯಿಲ್ಲ. ಥಿಯೇಟರಿನ ಒಳಹೊಕ್ಕವರು ಹೊರಬರುವಾಗ ಗಹಗಹಿಸುತ್ತಲೇ ಬರುತ್ತಾರೆ ಅನ್ನೊದು ಚಿತ್ರತಂಡದ ಪ್ರಾಮಿಸ್.