ಕೆಜಿಎಫ್, ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬೇಕು ಅನ್ನೋದು ಅಂಬರೀಷ್ ಕನಸಾಗಿತ್ತು. ಚಿತ್ರದ ಮೊದಲ ಟೀಸರ್ ಬಿಡುಗಡೆ ವೇಳೆ ಅಂಬಿ ಇದನ್ನು ಹೇಳಿದ್ದರು. ಚಿತ್ರದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆನ್ನು ತಟ್ಟಿದ್ದ ಅಂಬರೀಷ್, ಚಿತ್ರ ಬಿಡುಗಡೆ ವೇಳೆ ಇರಲಿಲ್ಲ. ಇದೊಂದು ನೋವು ನನಗಿದೆ ಎಂದು ಹೇಳಿಕೊಂಡಿದ್ದ ಯಶ್‍ಗೆ ಈಗ ಸುಮಲತಾ ಅಂಬರೀಷ್ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರ ಶುದ್ಧ ಚಿನ್ನ ಎಂದಿದ್ದಾರೆ ಸುಮಲತಾ.
ಸುಮಲತಾ ಅವರು ಚಿತ್ರ ನೋಡಿರುವುದೇ ನನ್ನ ಭಾಗ್ಯ ಎಂದಿರುವ ಯಶ್, ಅಕ್ಕನಿಗೆ ಥ್ಯಾಂಕ್ಸ್ ಎಂದಿದ್ದಾರೆ. ಅಣ್ಣ ಇದ್ದಿದ್ದರೆ ಖಂಡಿತಾ ಚಿತ್ರ ನೋಡಿರುತ್ತಿದ್ದರು. ಈಗಲೂ ಅವರು ಮೇಲಿಂದಲೇ ಹರಸುತ್ತಿದ್ದಾರೆ ಎಂದಿದ್ದಾರೆ ಯಶ್.