ಉಪೇಂದ್ರ-ಆರ್.ಚಂದ್ರು-ರಚಿತಾ ರಾಮ್ ಕಾಂಬಿನೇಷನ್‍ನ ಐ ಲವ್ ಯೂ ಸಿನಿಮಾದ ಆಡಿಯೋ ಲಾಂಚ್‍ಗೆ ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ರಾಜಮೌಳಿ ಬರುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಸಿದ್ಧವಾಗುತ್ತಿರುವ ಐ ಲವ್ ಯೂ ಚಿತ್ರದ ಆಡಿಯೋ ಲಾಂಚ್‍ನ್ನೇ ಅದ್ಧೂರಿಯಾಗಿ ಮಾಡಲು ನಿರ್ಧರಿಸಿದ್ದಾರೆ ಚಂದ್ರು. ಜನವರಿ 12ರಂದು, ದಾವಣಗೆರೆಯಲ್ಲಿ ಆಡಿಯೋ ಲಾಂಚ್ ಆಗಲಿದೆ.
`ರಾಜಮೌಳಿ ಅವರನ್ನು ನಾನೇ ಕೇಳಿಕೊಂಡೆ. ಅವರು ಬಳ್ಳಾರಿಯಲ್ಲಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು. ನಾನು ದಾವಣಗೆರೆಯಲ್ಲಿ ಮಾಡುತ್ತಿದ್ದೇವೆ ಎಂದಾಗ ಓಕೆ ಎಂದು ಒಪ್ಪಿಕೊಂಡರು' ಎಂದು ವಿವರ ನೀಡಿದ್ದಾರೆ ಆರ್.ಚಂದ್ರು.
ಆಡಿಯೋ ಲಾಂಚ್‍ಗೆ ರಜನಿಕಾಂತ್ ಅವರನ್ನೂ ಆಹ್ವಾನಿಸಲು ಚಿಂತನೆ ನಡೆದಿದೆ. ಉಪೇಂದ್ರ ಅವರು ರಜನಿ ಸಂಪರ್ಕದಲ್ಲಿದ್ದಾರೆ. ಅದೇ ದಿನ ರಜನಿಕಾಂತ್‍ರ ಪೆಟ್ಟಾ ರಿಲೀಸ್ ಇದೆ. ಬರುತ್ತಾರೋ.. ಇಲ್ಲವೋ.. ಕನ್‍ಫರ್ಮ್ ಇಲ್ಲ ಎಂದಿದ್ದಾರೆ ಚಂದ್ರು. ಚಿತ್ರವನ್ನು ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ತೆರೆಗೆ ತರಲು ಚಿತ್ರತಂಡ ಸಿದ್ಧಗೊಂಡಿದೆ.