ಕೆಜಿಎಫ್ ಚಿತ್ರದ ಬಿಡುಗಡೆ, ದೇಶಾದ್ಯಂತ ಹಬ್ಬವಾಗಿರುವ ಹೊತ್ತಿನಲ್ಲೇ ಯಶ್ ಅವರನ್ನು ಇದೊಂದು ಕೊರಗು ಕಾಡುತ್ತಲೇ ಇದೆ. ಅಂಬರೀಷ್ ಸರ್ ಕೆಜಿಎಫ್ ನೋಡಬೇಕಿತ್ತು ಎನ್ನುವುದೇ ಆ ಕೊರಗು.
ಕೆಜಿಎಫ್ ಚಿತ್ರದ ಒಂದು ಟ್ರೇಲರ್‍ನ್ನು ಸ್ವತಃ ಅಂಬರೀಷ್ ರಿಲೀಸ್ ಮಾಡಿದ್ದರು. ಕನ್ನಡ ಚಿತ್ರರಂಗ ಮುಗಿಲೆತ್ತರಕ್ಕೆ ಬೆಳೆಯಬೇಕು. ಕೆಜಿಎಫ್‍ನಿಂದ ಅದು ನನಸಾಗಲಿ ಎಂದು ಹಾರೈಸಿದ್ದರು. ಈಗ, ರಿಲೀಸ್ ವೇಳೆ ಅವರೇ ಇಲ್ಲ.
ನನ್ನ ಬೆನ್ನ ಹಿಂದೆ ಅವರಿದ್ದರು. ನನ್ನ ಕೆಲಸಗಳನ್ನು ನೋಡಿ ಬೆನ್ನು ತಟ್ಟಿದ್ದರು. ಸಿನಿಮಾದ ಶೋ ರೀಲ್ ತೋರಿಸಿದಾಗ ಖುಷಿ ಪಟ್ಟಿದ್ರು. ಅವರು ಇದ್ದಿದ್ದರೆ ನಮಗೊಂದು ಶಕ್ತಿ ಇರುತ್ತಿತ್ತು. ಅವರು ಈ ಸಿನಿಮಾ ನೋಡಬೇಕಿತ್ತು ಎಂದು ಹೇಳಿಕೊಂಡಿದ್ದಾರೆ ಯಶ್.