ಅಯೋಗ್ಯ ಹಿಟ್ ಆದ ಖುಷಿಯಲ್ಲಿರೋ ನೀನಾಸಂ ಸತೀಶ್, ಚಂಬಲ್ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ. ಚಂಬಲ್ ವಿಶೇಷ ಸಿನಿಮಾ. ಇದುವರೆಗೆ ನೀನಾಸಂ ಸತೀಶ್‍ರನ್ನು ನೋಡದೇ ಇರುವ ಲುಕ್ ಈ ಚಿತ್ರದಲ್ಲಿದೆ. ಕಥೆ ಕೂಡಾ ಡಿಫರೆಂಟ್. ಈಗ ಆ ಖುಷಿಗೆ ಇನ್ನೊಂದು ದೊಡ್ಡ ಖುಷಿ ಸೇರಿದೆ.
ಚಂಬಲ್ ಚಿತ್ರದ ತಮಿಳು ವರ್ಷನ್‍ನ್ನು ರಜನಿಕಾಂತ್ ಅಳಿಯ, ಸ್ಟಾರ್ ನಟ ಧನುಷ್ ಪ್ರಮೋಟ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ಚಿತ್ರಕ್ಕೆ ಈಗಾಗಲೇ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಧ್ವನಿ ಕೊಟ್ಟಿದ್ದಾರೆ. ಈಗ ಚಿತ್ರಕ್ಕೆ ಧನುಷ್ ಬೆಂಬಲವೂ ಸಿಕ್ಕಿದೆ. ಮಾರುಕಟ್ಟೆ, ಉತ್ತಮ ಬಾಂಧವ್ಯದ ದೃಷ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ ನೀನಾಸಂ ಸತೀಶ್.