` ವಿಲನ್ ಎಫೆಕ್ಟ್.. ಕೆಜಿಎಫ್‍ಗಾಗಿ ಬದಲಾಗುತ್ತಿದೆ ನರ್ತಕಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
nartaki theater updates its technology
Nartaki Theater, Yash Image from KGF

ಕೆಜಿಎಫ್ ರಿಲೀಸ್ ವೇಳೆ ನರ್ತಕಿ ಚಿತ್ರಮಂದಿರ ಬದಲಾಗುತ್ತಿದೆ. ಚಿತ್ರಮಂದಿರದಲ್ಲಿ 4ಕೆ ರೆಸಲ್ಯೂಷನ್ ಸ್ಕ್ರೀನ್ ಹಾಕಲಾಗುತ್ತಿದ್ದು, 2ಕೆನಲ್ಲಿ ಸ್ಕ್ರೀನಿಂಗ್ ಆಗಲಿದೆ. ಅಷ್ಟೇ ಅಲ್ಲ, ಚಿತ್ರಮಂದಿರದ ಸೌಂಡಿಂಗ್ ಸಿಸ್ಟಂನ್ನೂ ಆಧುನೀಕರಣ ಮಾಡಲಾಗುತ್ತಿದೆ. 

ಅದಕ್ಕೆಲ್ಲ ಕಾರಣ ದಿ ವಿಲನ್. ಸಿನಿಮಾ ರಿಲೀಸ್ ಆದ ದಿನ ನರ್ತಕಿ ಚಿತ್ರಮಂದಿರದ ವ್ಯವಸ್ಥೆ ಸರಿಯಿಲ್ಲ ಎಂದು ನಿರ್ದೇಶಕ ಪ್ರೇಮ್, ಕಿಡಿಕಾರಿದ್ದರು. ಚಿತ್ರಮಂದಿರದವರೂ ಸಮರ್ಥನೆ ಕೊಟ್ಟಿದ್ದರು. ಆದರೆ, ಈ ಬಾರಿ ಯಾವುದೇ ಚಾನ್ಸ್ ತೆಗೆದುಕೊಳ್ಳದೆ ಚಿತ್ರಮಂದಿರವನ್ನು ಟೆಕ್ನಿಕಲಿ ಅಪ್‍ಡೇಟ್ ಮಾಡಲಾಗುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಡಿಸೆಂಬರ್ 21ರಂದು ಕೆಜಿಎಫ್, ನರ್ತಕಿಯಲ್ಲಿ ಬೇರೆಯದ್ದೇ ಅನುಭವ ನೀಡಲಿದೆ.