ಕೆಜಿಎಫ್ ಮೇಲೆ ನಂಬಿಕೆ ಇಡೋಕೆ ಅತಿ ದೊಡ್ಡ ಕಾರಣ ಯಶ್ ಅಷ್ಟೇ ಅಲ್ಲ, ಪ್ರಶಾಂತ್ ನೀಲ್. ಅದಕ್ಕೂ ಮುನ್ನ ಪ್ರಶಾಂತ್ ನೀಲ್ ಮಾಡಿದ್ದ ಉಗ್ರಂ ಚಿತ್ರ, ಅದ್ಭುತ ಪ್ರೆಸೆಂಟೇಷನ್‍ನಿಂದ ಗಮನ ಸೆಳೆದಿದ್ದ ಸಿನಿಮಾ. ಬಹುಶಃ ಆ ಸಿನಿಮಾ ಮಾಡದೇ ಹೋಗಿದ್ದರೆ, ಪ್ರಶಾಂತ್ ನೀಲ್ ಇಂದು ಕೆಜಿಎಫ್ ಮಾಡೋಕೆ ಸಾಧ್ಯವೇ ಇರಲಿಲ್ಲ. ಆ ರಹಸ್ಯವನ್ನೂ ಯಶ್ ಅವರೇ ಬಿಚ್ಚಿಟ್ಟಿದ್ದಾರೆ.
ಪ್ರಶಾಂತ್ ಅದ್ಭುತ ನಿರ್ದೇಶಕ. ಆದರೆ, ಕೆಟ್ಟದಾಗಿ ನರೇಶನ್ ಮಾಡ್ತಾರೆ. ಅವರು ಕಥೆಯನ್ನು ನಮಗೆ ಹೇಳುವಾಗ, ಅವರ ಕಲ್ಪನೆಯ ಹತ್ತಿರಕ್ಕೂ ಹೋಗೋಕೆ ಆಗಲ್ಲ. ಮೊದಲ ಬಾರಿ ಇವರು ಕೆಜಿಎಫ್ ಐಡಿಯಾ ಹೇಳಿದಾಗ ನಾನೇ ನಕ್ಕುಬಿಟ್ಟಿದ್ದೆ. ಏನೋ ಸ್ಪೆಷಲ್ ಇದೆ ಎನ್ನಿಸಿದರೂ ಏನು ಎಂದು ಅರ್ಥವಾಗಿರಲಿಲ್ಲ. ಉಗ್ರಂ ನೋಡಿದ ಮೇಲೆ, ನನಗೆ ಆ ಕಥೆ ಹೇಳಿದ ಇವರೇನಾ ಉಗ್ರಂ ಮಾಡಿದ್ದು ಎನ್ನುವಷ್ಟು ಅಚ್ಚರಿಯಾಗಿತ್ತು. ನಂತರ ಕೆಜಿಎಫ್ ಒಪ್ಪಿದೆವು. ಕಥೆ ಹೇಳುವಾಗಿನ ಪ್ರಶಾಂತ್ ನೀಲ್ ಬೇರೆ. ಡೈರೆಕ್ಷನ್ ಮಾಡುವಾಗಿನ ಪ್ರಶಾಂತ್ ನೀಲ್ ಬೇರೆ. ಅವರಿಗೆ ಏನು ಬೇಕು ಅನ್ನೋದು ಅತ್ಯಂತ ಸ್ಪಷ್ಟವಾಗಿ ಗೊತ್ತು. ಅದನ್ನು ಅವರು ಎಲ್ಲಿಯೂ ಬಿಟ್ಟುಕೊಡದೇ ಮಾಡ್ತಾರೆ. ಅಂತಹ ಬೆರಗು ಹುಟ್ಟಿಸುವ ನಿರ್ದೇಶಕ ಪ್ರಶಾಂತ್ ನೀಲ್''
ಇದು ಯಶ್, ಪ್ರಶಾಂತ್ ಬಗ್ಗೆ ಹೇಳಿರುವ ಮಾತು. ಯಶ್ ಪ್ರಕಾರ, ಪ್ರಶಾಂತ್ ನೀಲ್ ಅವರ ಅತಿದೊಡ್ಡ ಬಂಡವಾಳ, ಹೂಡಿಕೆ ಉಗ್ರಂ. ಈಗ ಕೆಜಿಎಫ್ ಬರುತ್ತಿದೆ. ಪ್ರಶಾಂತ್ ನೀಲ್‍ಗಷ್ಟೇ ಏಕೆ, ಕೆಜಿಎಫ್.. ಕನ್ನಡ ಚಿತ್ರರಂಗಕ್ಕೇ ಒಂದು ಚಾಲೆಂಜ್. ಗೆಲ್ಲಬೇಕು.