ಅಜೇಯ್ ರಾವ್ಗೂ, ಕೃಷ್ಣಂಗೂ ನಂಟಿದೆ. ಅದು ಸೂಪರ್ ಹಿಟ್ ನಂಟು. ಅಜೇಯ್ ರಾವ್ ಇದುವರೆಗೆ ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣಲೀಲಾ ಚಿತ್ರಗಳಲ್ಲಿ ನಟಿಸಿದ್ದಾರೆ. ಎಲ್ಲ ಕೃಷ್ಣನ ಸ್ಟೋರಿಗಳೂ ಸೂಪರ್ ಹಿಟ್. ಹೀಗಾಗಿಯೇ.. ಮತ್ತೊಮ್ಮೆ ಕೃಷ್ಣನಾಗುತ್ತಿದ್ದಾರೆ ಅಜೇಯ್ ರಾವ್.
ಕೃಷ್ಣನ್ ಕಿರಿಕ್ ಸ್ಟೋರಿ ಅನ್ನೋ ಸೆಟ್ಟೇರುವ ಸಾಧ್ಯತೆ ಇದ್ದು, ಗುರು ದೇಶಪಾಂಡೆ ನಿರ್ಮಾಪಕ. ಗುರು ದೇಶಪಾಂಡೆ ಅವರ ಜೊತೆಯಲ್ಲೇ ಸಹನಿರ್ದೇಶಕರಾಗಿದ್ದ ರಾಜವರ್ಧನ್ ಶಂಕರ್, ಈ ಚಿತ್ರದಿಂದ ನಿರ್ದೇಶಕರಾಗಿದ್ದಾರೆ.
ಜನವರಿ 24ರಂದು ಅಜೇಯ್ ರಾವ್ ಹುಟ್ಟುಹಬ್ಬ. ಅದೇ ದಿನ ಚಿತ್ರಕ್ಕೆ ಮುಹೂರ್ತ ನಡೆಯಲಿದ್ದು, ಶೂಟಿಂಗ್ ಶುರುವಾಗಲಿದೆ.