ಮದಗಜ ಟೈಟಲ್ ಯಾರಿಗೆ..? ಶ್ರೀಮುರಳಿಗಾ..? ದರ್ಶನ್‍ಗಾ..? ಇದು ಇತ್ತೀಚೆಗೆ ಕನ್ನಡ ಚಿತ್ರರಂಗದ ಬಹುದೊಡ್ಡ ವಿವಾದವಾಗಿ ಹೋಗಿತ್ತು. ನಿರ್ದೇಶಕ ಮಹೇಶ್ ಕುಮಾರ್, ನಿರ್ಮಾಪಕ ಪ್ರವೀಣ್ ಕುಮಾರ್ ನಡುವೆ ವಾರ್ ಶುರುವಾಗಿತ್ತು. ಈ ಗಲಾಟೆ ಎಲ್ಲಿಗೆ ಹೋಗಿ ಮುಟ್ಟಲಿದೆಯೋ ಎಂದುಕೊಂಡಿದ್ದವರಿಗೆ ಒಂದು ಸಿಹಿ ಸುದ್ದಿ ಬಂದಿದೆ.
ವಿವಾದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮದಗಜ ಟೈಟಲ್‍ನ್ನೂ ಬದಲಿಸಿದ್ದಾರೆ. ಶ್ರೀಮುರಳಿ ಹುಟ್ಟುಹಬ್ಬಕ್ಕೆಂದು ಮದಗಜ ಚಿತ್ರದ ಪೋಸ್ಟರ್ ರಿಲೀಸ್ ಆಗುತ್ತಿದ್ದು, ಆ ಪೋಸ್ಟರ್‍ನ್ನು ಸ್ವತಃ ದರ್ಶನ್ ರಿಲೀಸ್ ಮಾಡಲಿದ್ದಾರೆ. ಆ ಮೂಲಕ ಮದಗಜ ಮಹಾಯುದ್ಧಕ್ಕೂ ತೆರೆ ಎಳೆಯಲಿದ್ದಾರೆ. ಮದಗಜ ನಿರ್ಮಿಸುತ್ತಿರುವ ಉಮಾಪತಿ, ದರ್ಶನ್ ಅವರ ಚಿತ್ರವೊಂದನ್ನೂ ನಿರ್ಮಾಣ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ವಿವಾದ ಬಗೆಹರಿಯುತ್ತಿದೆ.
ಅಂದಹಾಗೆ, ಮದಗಜ ಟೈಟಲ್‍ನ್ನು ರಿಜಿಸ್ಟರ್ ಮಾಡಿಸಿದ್ದ ಮೊದಲಿಗ ಎಂ.ಜಿ.ರಾಮಮೂರ್ತಿ. ದರ್ಶನ್‍ಗಾಗಿಯೇ ರಿಜಿಸ್ಟರ್ ಮಾಡಿಸಿದ್ದ ಟೈಟಲ್‍ನ್ನು ನಂತರ ಪ್ರವೀಣ್ ಕುಮಾರ್‍ಗೆ ವರ್ಗಾಯಿಸಿದ್ದರು. ಈಗ ಚಾಲೆಂಜಿಂಗ್ ಸ್ಟಾರ್‍ರಿಂದ ರೋರಿಂಗ್ ಸ್ಟಾರ್‍ಗೆ ಬಂದಿದೆ ಮದಗಜ.