ಕೋಟಿಗೊಬ್ಬ 3 ಸಿನಿಮಾದ ಶೂಟಿಂಗೇ ಮುಗಿದಿಲ್ಲ. ಆಗಲೇ ಸಿನಿಮಾಗೆ ಕೋಟಿ ಕೋಟಿ ಡಿಮ್ಯಾಂಡ್ ಶುರುವಾಗಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಇರುವ ಕಾರಣಕ್ಕೇ ಈ ಡಿಮ್ಯಾಂಡ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
ಚಿತ್ರದ ಹಿಂದಿ ಡಬ್ಬಿಂಗ್ ಮತ್ತು ಸ್ಯಾಟಲೈಟ್ ಹಕ್ಕುಗಳು ಭಾರೀ ಮೊತ್ತಕ್ಕೆ ಸೇಲ್ ಆಗಿವೆಯಂತೆ. ಇತ್ತೀಚೆಗೆ 9 ಕೋಟಿಗೆ ಹಿಂದಿ ಮತ್ತು ಟಿವಿ ರೈಟ್ಸ್ ಮಾರಾಟವಾಗಿವೆ ಎನ್ನಲಾಗಿತ್ತು. ಆದರೆ, ಈಗ ಚಿತ್ರಕ್ಕೆ 21 ಕೋಟಿ ಡಿಮ್ಯಾಂಡ್ ಎಂಬ ಹೊಸ ಮಾಹಿತಿ ಬಂದಿದೆ.
ನಿರ್ಮಾಪಕ ಸೂರಪ್ಪ ಬಾಬು ಯಾವುದನ್ನೂ ಇನ್ನೂ ಫೈನಲ್ ಮಾಡಿಲ್ಲ. ಶಿವ ಕಾರ್ತಿಕ್ ನಿರ್ದೇಶನದ ಚಿತ್ರಕ್ಕೆ ಮಡೋನಾ ಸೆಬಾಸ್ಟಿನ್ ನಾಯಕಿ. ಟೀಸರ್‍ನಿಂದಲೇ ದೊಡ್ಡ ಹವಾ ಎಬ್ಬಿಸಿದೆ ಕೋಟಿಗೊಬ್ಬ 3 ಸಿನಿಮಾ.