ಅಬ್ಬಾ.. ಇದರ ಬಗ್ಗೆ ಕೇಳಿದ್ದೆ. ಆದರೆ, ಇದು ಇಷ್ಟೊಂದು ಹಾಳಾಗಿದೆ ಎಂಬುದು ಗೊತ್ತಿರಲಿಲ್ಲ. ಹೃದಯ ಚೂರು ಚೂರಾಗಿದೆ.. ಇದು ಬೆಳ್ಳಂದೂರು ಕೆರೆಯ ಕುರಿತು ರಶ್ಮಿಕಾ ಮಂದಣ್ಣ ಹೇಳಿರುವ ಮಾತು.
ಬೆಳ್ಳಂದೂರು ಕೆರೆಯಲ್ಲಿ ಜಲ ಮಾಲಿನ್ಯದ ಅರಿವು ಮೂಡಿಸುವ ಕುರಿತು ಡಾಕ್ಯುಮೆಂಟರಿ ಮಾಡುತ್ತಿದ್ದು, ರಶ್ಮಿಕಾ ಅದರ ಫೋಟೋಶೂಟ್‍ನಲ್ಲಿ ಭಾಗವಹಿಸಿದ್ದಾರೆ. ಕೆರೆಯ ಸಮೀಪದಲ್ಲಿ ಫೋಟೋಶೂಟ್‍ನಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ, ಬೆಳ್ಳಂದೂರು ಕೆರೆಯ ದುಸ್ಥಿತಿ ನೋಡಿ ಮರುಗಿದ್ದಾರೆ.
ಬೆಳ್ಳಂದೂರು ಕೆರೆಯಲ್ಲಿ ಕೆಮಿಕಲ್ ನೊರೆಯೇ ತುಂಬಿಕೊಂಡಿದ್ದು, ಕಳೆದ 1 ವರ್ಷದಿಂದ ದೇಶಾದ್ಯಂತ ಸುದ್ದಿಯಾಗಿದೆ. ಇದುವರೆಗೆ ಬೆಳ್ಳಂದೂರು ಕೆರೆ ಶುದ್ಧೀಕರಣ ಕುರಿತು ತೆಗೆದುಕೊಂಡ ನಾಮ್‍ಕಾವಸ್ತೆ ಕ್ರಮಗಳು ಯಾವುದೇ ಪರಿಣಾಮ ಬೀರಿಲ್ಲ.